ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಗುತ್ತಿಗೆ ಹಿಡಿಯಲು ಸಹಕರಿಸಿದ್ದ ಮಧ್ಯವರ್ತಿ ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್ಗೆ ಅಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿ ಸುಮಾರು 225 ಕೋಟಿ ರೂ. (30 ಮಿಲಿಯನ್ ಯುರೋ) ಲಂಚ ನೀಡಿದೆ ಎಂದು ಜಾರಿ ನಿರ್ದೇಶನಾಲಯವು ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
3600 ಕೋಟಿ ಮೊತ್ತದ 12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಮೂವರು ದಲ್ಲಾಳಿಗಳಲ್ಲಿ ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್ ಕೂಡಾ ಒಬ್ಬನಾಗಿದ್ದು, ಅವನಿಗೆ ಸಂದಾಯವಾದ ಅಕ್ರಮ ಹಣ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯವು 1300 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಜೊತೆಗೆ ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್ ಸೇರಿದಂತೆ ಭಾರತೀಯ ಸಹಚರರ ಪಾತ್ರದ ಕುರಿತಾಗಿಯೂ ಇದರಲ್ಲಿ ವಿವರಿಸಿದೆ ಎನ್ನಲಾಗಿದೆ.
ವಿವಿಐಪಿ ಹೆಲಿಕಾಪ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಚಾರ್ಜ್ಶೀಟ್ ಜಾರಿ ನಿರ್ದೇಶನಾಲಯ ಸಲ್ಲಿಸಿದೆ. ಕ್ರಿಸ್ಟಿಯನ್ ಮಿಶೆಲ್ ಜೇಮ್ಸ್ ಕುರಿತಾದ ವಿವರಗಳು, ಭಾರತಕ್ಕೆ ನೀಡಿದ ಭೇಟಿ, ವ್ಯವಹಾರಗಳು ಎಲ್ಲ ವಿವರಣೆಗಳನ್ನೊಳಗೊಂಡ ಮಾಹಿತಿಗಳು ಆರೋಪಪಟ್ಟಿಯಲ್ಲಿ ಇವೆ.
ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ಶೀಟ್ ನಿಂದಾಗಿ ತನಿಖೆಗೆ ಸಹಕಾರ ನೀಡದೆ ಬ್ರಿಟನ್ನಿನಲ್ಲಿರುವ ಕ್ರಿಸ್ಟಿಯನ್ ಮಿಶೆಲ್ನನ್ನು ಬ್ರಿಟನ್ನಿನಿಂದ ಗಡೀಪಾರು ಮಾಡಲು ಈ ಚಾರ್ಜ್ಶೀಟ್ ಮಹತ್ವದ್ದಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.