ನವದೆಹಲಿ: ಭಾರತದ 5 ವಿಶ್ವವಿದ್ಯಾಲಯಗಳು ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಏಷ್ಯಾದ ಅಗ್ರ 50 ವಿಶ್ವವಿದ್ಯಾಲಯಗಳ ಶ್ರೇಯಾಂಕ – ಕ್ಯೂಎಸ್ ವಿಶ್ವವಿದ್ಯಾಲಯ 2016ರ ಶ್ರೇಯಾಂಕ ವಿವಿರ ಬಿಡುಗಡೆ ಮಾಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ 33 ನೇ ಸ್ಥಾನ ಗಳಿಸಿದ್ದು, ಐಐಟಿ ಮುಂಬೈ 35 ನೇ ಸ್ಥಾನ, ಐಐಟಿ ದೆಹಲಿ 36 ನೇ ಸ್ಥಾನ, ಐಐಟಿ ಮದ್ರಾಸ್ 43 ನೇ ಸ್ಥಾನ ಮತ್ತು ಐಐಟಿ ಕಾನ್ಪುರ 48 ನೇ ಸ್ಥಾನ ಗಳಿಸಿದೆ.
ಇನ್ನುಳಿದಂತೆ ಐಐಟಿ ಕರಗ್ಪುರ 51 ನೇ ಸ್ಥಾನ, ದೆಹಲಿ ವಿವಿ 66 ನೇ ಸ್ಥಾನ, ಐಐಟಿ ರೂರ್ಕಿ 78 ನೇ ಸ್ಥಾನ, ಐಐಟಿ ಗುವಾಹಾಟಿ 94ನೇ ಸ್ಥಾನ ಪಡೆದು ಟಾಪ್ 100ರ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
2015 ಕ್ಕೆ ಹೋಲಿಸಿದರೆ ಭಾರತೀಯ ವಿಶ್ವವಿದ್ಯಾಲಯಗಳು ಈ ಬಾರಿ ಗಮನಾರ್ಹ ಸಾಧನೆ ಮಾಡಿದ್ದು, ಏಷ್ಯಾದಲ್ಲಿನ ಒಟ್ಟು 17 ದೇಶಗಳಲ್ಲಿ ಭಾರತ 5ನೇ ಸ್ಥಾನ ಗಳಿಸಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಕಳೆದ ವರ್ಷ 34 ನೇ ಸ್ಥಾನವನ್ನು ಗಳಿಸಿತ್ತು. ದೆಹಲಿ ವಿವಿ ಕಳೆದ ವರ್ಷ 91 ನೇ ಸ್ಥಾನದಲ್ಲಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.