ಪುತ್ತೂರು : ಯೋಗದಿಂದ ರೋಗ ದೂರವಾಗುತ್ತದೆ. ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢತೆ ಹೊಂದಲು ಸಾಧ್ಯ ಎಂದು ನಿವೃತ್ತ ಸೈನಿಕ ಸುಂದರ ಗೌಡ ನಡುಬೈಲು ಹೇಳಿದರು.
ಅವರು ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವಕೇಂದ್ರ ಮಂಗಳೂರು, ಆನಾಜೆ ಮಹಾವಿಷ್ಣು ಸೇವಾ ಸಮಿತಿ, ಜೆಸಿಐ ಸವಣೂರು ಇದರ ಆಶ್ರಯದಲ್ಲಿ ಜೂ.12 ರಂದು ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಅತಿಥಿಯಾಗಿ ಮಾತನಾಡಿದರು.
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಕಳೆದ ಬಾರಿ ದೇಶದಲ್ಲಿ ನಡೆದ ಸಾಮೂಹಿಕ ಯೋಗದಿನಾಚರಣೆ ವಿಶ್ವದಾಖಲೆಯಾಗಿದೆ. ನಮ್ಮ ಆರೋಗ್ಯದ ದೃಷ್ಟಿಯಲ್ಲಿ ನಿತ್ಯ ನಿರಂತರವಾಗಿ ಯೋಗ ಮಾಡುವುದು ಅವಶ್ಯ. ಯೋಗ ಮಾಡುವುದು ಒಂದು ದಿನಕ್ಕೆ ಸೀಮಿತವಾಗಬಾರದು ನಿರಂತರತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಆನಾಜೆ ಮಹಾವಿಷ್ಣು ಸೇವಾ ಸಮಿತಿಯ ಅಧ್ಯಕ್ಷ ಉಮೇಶ್ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಅಂತರ್ರಾಷ್ಟ್ರೀಯ ಪ್ರಶಸ್ತಿ ವಿಜೇತ ಯೋಗಪಟು ಹೇಮಚಂದ್ರಹಾಸ್ ಅಗಳಿ ಯೋಗ ತರಬೇತಿ ನಡೆಸಿಕೊಟ್ಟರು. ಉಮೇಶ್ ಸ್ವಾಗತಿಸಿ, ಶೇಖರ್ ಗೌಡ ಆನಾಜೆ ವಂದಿಸಿದರು. ಗೋಪಾಲಕೃಷ್ಣ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.