ಫ್ಲೋರಿಡಾ: ಫ್ಲೋರಿಡಾದಲ್ಲಿನ ಒರ್ಲಾಂಡೋ ನೈಟ್ ಕ್ಲಬ್ ಮೇಲೆ ಓರ್ವ ಏಕಾಏಕಿ ತನ್ನ ಸ್ವಯಂಚಾಲಿತ ಬಂದೂಕಿನಿಂದ ಗುಂಡಿನ ಸುರಿಮಳೆ ಗರೆದಿದ್ದು ಈ ದಾಳಿಯಲ್ಲಿ ಸುಮಾರು 50 ಜನ ಅಮಾಯಕರು ಮೃತಪಟ್ಟು, 54 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಹಂತಕ ಕೆಲವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ, ತದನಂತರ ಸ್ಥಳಕ್ಕಾಗಮಿಸಿದ ಪೊಲೀಸರು 4 ಗಂಟೆಗಳ ಸತತ ಕಾರ್ಯಾಚರಣೆಯಿಂದ ಹಂತಕನನ್ನು ಹತ್ಯೆಗೈದಿದ್ದಾರೆ.
ಈ ದಾಳಿಯನ್ನು ಇಸಿಸ್ ಉಗ್ರ ಸಂಘಟನೆ ತಾವೇ ನಡೆಸಿದ್ದು ಎಂದು ಹೇಳಿಕೊಂಡಿದೆ. ದಾಳಿ ನಡೆಸಿದಾತ ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿ ನಿವಾಸಿ ಒಮರ್ ಮಾತೀನ್ ಎಂದು ಹೇಳಲಾಗಿದ್ದು, ಈತ ಇಸಿಸ್ ಉಗ್ರ ಸಂಘಟನೆಯ ಯೋಧನಾಗಿದ್ದನೆಂದು ಇಸಿಸ್ ಸಂಘಟನೆಯ ಮುಖವಾಣಿ ಅಮಾಖ್ ನಲ್ಲಿ ಮಾಹಿತಿ ಇದೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಸಲಿಂಗಿಗಳನ್ನು ವಿರೋಧಿಸುತ್ತಿದ್ದ ಇಸಿಸ್ ಸಂಘಟನೆ ಒರ್ಲಾಂಡೋ ನೈಟ್ ಕ್ಲಬ್ ಮೇಲಿನ ದಾಳಿಗೆ ಕಾರಣವಾಗಿರಬಹುದು ಎನ್ನಲಾಗಿದೆ. ಈ ನೈಟ್ ಕ್ಲಬ್ ಸಲಿಂಗಿಗಳ ಕ್ಲಬ್ ಆಗಿದ್ದು, ಇಲ್ಲಿ ಸಲಿಂಗಿಗಳು ಪರಸ್ಪರ ಮುತ್ತಿಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಕಡು ವಿರೋಧಿ ನಿಲುವು ಹೊಂದಿರುವ ಹಿನ್ನೆಲೆಯಲ್ಲಿ ಇಸಿಸ್ ಸಂಘಟನೆಗೆ ಸೇರಿದ ಒಮರ್ ಮಾಟಿನ್ ಈ ದಾಳಿ ನಡೆಸಿರಬಹುದು ಎನ್ನಲಾಗಿದೆ.
9/11 ಉಗ್ರ ದಾಳಿ ಬಳಿಕ ಅಮೆರಿಕದಲ್ಲಿ ನಡೆದ ಮೊದಲ ಉಗ್ರ ದಾಳಿ ಇದಾಗಿದ್ದು, ಬರಾಕ್ ಒಬಾಮಾ ಈ ಕೃತ್ಯವನ್ನು ಖಂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.