ಧಾಕಾ: ಬೇಸಿಗೆ ಕಾಲದಲ್ಲಿ ಬಹಳಷ್ಟು ಜನರು ವಿದ್ಯುತ್ ಲೋಡ್-ಶೆಡ್ಡಿಂಗ್ನಿಂದಾಗಿ ಬೇಸತ್ತಿರುವುದು ಸಹಜ. ಬಾಂಗ್ಲಾದೇಶದಲ್ಲಿ ಟಿನ್ ಶೀಟ್ಗಳ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಈ ಬಾರಿಯ ವಿಪರೀತ ಸೆಖೆಯಿಂದ ಪರಿಹಾರ ಪಡೆಯಲು ಪರಿಸರ ಸ್ನೇಹಿ ಮತ್ತು ಅಗ್ಗದ ಪ್ಲಾಸ್ಟಿಕ್ ‘ಬಾಟಲ್ ಎಸಿ’ ತಯಾರಿಸಿದ್ದಾರೆ.
ಆ್ಯಶಿಸ್ ಪೌಲ್ ಅವರು ತಮ್ಮ ಪುತ್ರಿಯ ಭೌತಶಾಸ್ತ್ರ ಪುಸ್ತಕದಿಂದ ಈ ಪರಿಕಲ್ಪನೆಯನ್ನು ಪಡೆದು ’ಪ್ಲಾಸ್ಟಿಕ್ ಬಾಟಲ್ ಎಸಿ’ಯನ್ನು ವಿನ್ಯಾಸಗೊಳಿಸಿದ್ದಾರೆ.
ಬಾಟಲ್ಗಳನ್ನು ಅರ್ಧಕ್ಕೆ ಕತ್ತರಿಸಿ ಟಿನ್ ಬೋರ್ಡ್ಗಳ ಮೇಲೆ ಇರಿಸಿಲಾಗುತ್ತಿದ್ದು, ಮನೆಯ ಕಿಟಕಿಗಳಲ್ಲಿ ಈ ಬಾಟಲ್ಗಳ ಬೋರ್ಡ್ಗಳನ್ನು ಒಳಮುಖವಾಗಿ ಇರಿಸಲಾಗುತ್ತದೆ. ಗಾಳಿ ಬೀಸುವ ಸಂದರ್ಭ ಗಾಳಿಯ ವೇಗ ಕಡಿಮೆಯಾಗಿ ಉಷ್ಣಾಂಶ ಪರಿವರ್ತನೆಗೊಂಡು ತಣ್ಣನೆ ಗಾಳಿ ಒಳಪ್ರವೇಶಿಸುತ್ತದೆ.
ಬಾಂಗ್ಲಾದೇಶದ ಸುಮಾರು 25,000 ಕುಟುಂಬಗಳು ಈ ವಿಧಾನವನ್ನು ಬಳಸುತ್ತಿದ್ದು, ತಮ್ಮ ಮನೆಗಳಲ್ಲಿ 5 ಡಿಗ್ರಿ ಉಷ್ಣಾಂಶವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳುತ್ತಾರೆ.
ಈ ಪ್ಲಾಸ್ಟಿಕ್ ಬಾಟಲ್ಗಳು ಸುಲಭವಾಗಿ ದೊರಕುತ್ತಿದ್ದು, ಗಾಳಿಯನ್ನು ತಂಪಾಗಿಸುವುದು ಮಾತ್ರವಲ್ಲದೇ ಧೂಳುಮುಕ್ತ ಆಗಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.