ವಾಷಿಂಗ್ಟನ್: ಭಾರತದ ಸಂವಿಧಾನ ’ಪವಿತ್ರ ಪುಸ್ತಕ’ವಾಗಿದ್ದು, ಅದು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ಒಳಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ.
ಭಾರತ ಒಂದಾಗಿ ಬೆಳೆದು, ಒಂದಾಗಿ ಬದುಕಿ, ಒಂದಾಗಿ ಆಚರಣೆಗಳನ್ನು ಆಚರಿಸುತ್ತದೆ. ನನ್ನ ಸರ್ಕಾರಕ್ಕೆ ಸಂವಿಧಾನ ಪವಿತ್ರ ಪುಸ್ತಕವಾಗಿದ್ದು, ನಂಬಿಕೆ, ವಾಕ್ಸ್ವಾತಂತ್ರ್ಯ, ವಿಸ್ತರಣೆ, ಸಮಾನತೆಯ ಸ್ವಾತಂತ್ರ್ಯ ಪ್ರಜೆಗಳ ಮೂಲಭೂತ ಹಕ್ಕುಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಮೇರಿಕಾದ ಯುಎಸ್ ಕಾಂಗ್ರೆಸ್ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು ಭಾರತ ಹಾಗೂ ಅಮೇರಿಕಾದ ಇತಿಹಾಸ ಭಿನ್ನ ಸಂಸ್ಕೃತಿ, ಧರ್ಮ, ನಂಬಿಕೆಗಳಿಂದ ಕೂಡಿದೆ. ಆದರೂ ನಮ್ಮ ರಾಷ್ಟ್ರಗಳ ಪ್ರಜಾಪ್ರಭುತ್ವ, ಪ್ರಜೆಗಳ ಸ್ವಾತಂತ್ರ್ಯ ನಮ್ಮ ನಂಬಿಕೆಗಳನ್ನು ಒಂದುಗೂಡಿಸಿವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ತಪ್ಪು ಹಾದಿಯನ್ನು ಹಿಡಿಯುತ್ತಿದೆ. ಧಾರ್ಮಿಕ ಸಹಿಷ್ಣುತೆ ಹದಗೆಡುತ್ತಿದ್ದು, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಹೆಚ್ಚುತ್ತಿದೆ ಎಂದು ಯುಎಸ್ ಕಾಂಗ್ರೆಸ್ ಅಧೀನದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ 2015ರ ವಾರ್ಷಿಕ ವರದಿ ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.