ವಾಷಿಂಗ್ಟನ್: ಅಮೆರಿಕಾ ಸಂಸತ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಶಾಸಕರು ಎದ್ದನಿಂತು ಗೌರವ ಸೂಚಿಸಿದ್ದರು. ಇದು ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವೆಂದೇ ಬಣ್ಣಿಸಲಾಗಿದೆ.
ಅವರ ಭಾಷಣವನ್ನು ಕೇಳಲು, ಅವರನ್ನು ನೋಡಲೆಂದೇ ಟಿಕೆಟ್ ಪಡೆದು ಸದನದ ಗ್ಯಾಲರಿಯಲ್ಲಿ ಹಲವಾರು ಭಾರತೀಯರು ನೆರೆದಿದ್ದರು. ಮೋದಿ ಹಾಸ್ಯ ಮಿಶ್ರಿತವಾಗಿ ಮಾತನಾಡಿ ಎಲ್ಲಾ ಸಭಿಕರ ಮನಗೆದ್ದರು.
ಭಾಷಣ ಮಾಡುವ ವೇಳೆ ಅನಿವಾಸಿ ಭಾರತೀಯರು ಅಮೆರಿಕಾದಲ್ಲಿ ಮಾಡಿದ ಸಾಧನೆಗಳನ್ನು ಕೊಂಡಾಡಿದ ಅವರು, ಅಮೆರಿಕಾದ ಅತ್ಯುತ್ತಮ ಸಿಇಓಗಳು, ವೈದ್ಯರು, ಇಂಜಿನಿಯರ್ಗಳು, ವಿಜ್ಞಾನಿಗಳು ಭಾರತೀಯರು ಎನ್ನಲು ಹೆಮ್ಮೆ ಎನಿಸುತ್ತಿದೆ ಎಂದರು.
ಅಲ್ಲದೇ ಅಮೆರಿಕಾದಲ್ಲಿನ 3 ಮಿಲಿಯನ್ ಭಾರತೀಯರು ಎರಡೂ ದೇಶಗಳ ನಡುವೆ ಅತ್ಯಂತ ವಿಭಿನ್ನ ಹಾಗೂ ಕ್ರಿಯಾಶೀಲ ಸೇತುವೆ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.
ರಾಜೀವ್ ಗಾಂಧೀ, ಪಿ.ವಿ.ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಬಳಿಕ ಯುಎಸ್ ಕಾಂಗ್ರೆಸ್ನಲ್ಲಿ ಮಾತನಾಡುತ್ತಿರುವ ಭಾರತದ 5ನೇ ಪ್ರಧಾನಿ ನರೇಂದ್ರ ಮೋದಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.