ಬೀಜಿಂಗ್: ಮಹತ್ವದ ಬೆಳವಣಿಗೆಯೊಂದರಲ್ಲಿ ಇದೇ ಮೊದಲ ಬಾರಿಗೆ ಮುಂಬಯಿ 26/11 ದಾಳಿಯಲ್ಲಿ ಪಾಕಿಸ್ಥಾನ ಮೂಲದ ಲಷ್ಕರ್-ಇ-ತೋಯ್ಬಾ ಸೇರಿದಂತೆ ಇತರ ಉಗ್ರ ಸಂಘಟನೆಗಳ ಕೈವಾಡವಿದೆ ಎಂಬುದನ್ನು ಸಾರ್ವಜನಿಕವಾಗಿ ಚೀನಾ ಒಪ್ಪಿಕೊಂಡಿದೆ.
ಚೀನಾ ಸರ್ಕಾರ ಈ ಹೇಳಿಕೆ ನೀಡಿಲ್ಲವಾದರೂ, ಚೀನಾದ ಸರ್ಕಾರಿ ಸ್ವಾಮ್ಯದ ಸಿಸಿಟಿವಿ9 ಚಾನೆಲ್ನಲ್ಲಿ ರಿಲೀಸ್ ಆದ ಡಾಕ್ಯುಮೆಂಟರಿಯಲ್ಲಿ ಮುಂಬಯಿಯಲ್ಲಿ ನಡೆದ ದಾಳಿಯಲ್ಲಿ ಲಷ್ಕರ್ ಉಗ್ರರ ಕೈವಾಡವಿದೆ ಮತ್ತು ದಾಳಿಯ ಪ್ರಾಯೋಜಕರು ಪಾಕಿಸ್ಥಾನದಲ್ಲಿದ್ದರು ಎಂಬುದಾಗಿ ತಿಳಿಸಿದ್ದಾರೆ.
ಹಫೀಝ್ ಅಬ್ದುಲ್ ರೆಹಮಾನ್ ಮಕ್ಕಿ, ತಲ್ಹಾ ಸಯೀದ್, ಹಫೀಜ್ ಅಬ್ದುಲ್ ರಾಫ್ ಎಂಬ ಮೂವರು ಉಗ್ರರನ್ನು ಅಂತಾರಾಷ್ಟ್ರೀಯ ಉಗ್ರರು ಎಂಬುದನ್ನು ವಿಶ್ವಸಮುದಾಯ ಘೋಷಿಸುವುದಕ್ಕೆ ಚೀನಾ ತಾಂತ್ರಿಕ ಕಾರಣ ನೀಡಿ ತಡೆವೊಡ್ಡಿತ್ತು. ಅದು ನೀಡಿದ ತಡೆ ಜೂನ್ 9 ಕ್ಕೆ ಕೊನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಈ ಡಾಕ್ಯುಮೆಂಟರಿ ಮಹತ್ವದ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ.
ಇಡೀ ವಿಶ್ವ ಉಗ್ರರ ವಿರುದ್ಧವಿದ್ದರೆ ಚೀನಾ ಪಾತ್ರ ಪಾಕ್ ಸ್ನೇಹಕ್ಕಾಗಿ ಉಗ್ರರ ಪರ ನಿಂತಿತ್ತು. ಇದಕ್ಕಾಗಿ ಭಾರತ ಪಾತ್ರವಲ್ಲ, ಅನೇಕ ರಾಷ್ಟ್ರಗಳ ಟೀಕೆಗೆ ಗುರಿಯಾಗಿತ್ತು. ಇದೀಗ ಅದು ತನ್ನ ಮನೋಭಾವವನ್ನು ಬದಲಾಯಿಸುವತ್ತ ಚಿಂತನೆ ನಡೆಸಿದಂತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.