ನ್ಯೂಯಾರ್ಕ್: ಭಾರತದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಪರ್ವ (ಎಂಟಿಸಿಆರ್) ಸೇರುವ ಪ್ರಯತ್ನ ಧನಾತ್ಮಕವಾಗಿ ಸಾಗುತ್ತಿದ್ದು, ಯಾವುದೇ ಅಡೆತಡೆಗಳಿಲ್ಲದೇ ಶೀಘ್ರವೇ ಸೇರ್ಪಡೆಗೊಳ್ಳಲಿದೆ. 34 ರಾಷ್ಟ್ರಗಳ ಈ ಗುಂಪಿಗೆ ಭಾರತ ಕೂಡ ಸೇರ್ವಡೆಗೊಳ್ಳುವ ನಿರೀಕ್ಷೆ ಇದೆ ಎಂದು ಅಮೇರಿಕಾದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭಾರತದ ಎಂಟಿಸಿಆರ್ ಸದಸ್ಯತ್ವ, ಆಸ್ಟ್ರೇಲಿಯಾ ಗ್ರೂಪ್, ನ್ಯೂಕ್ಲಿಯರ್ ಸಪ್ಲಯರ್ಸ್ ಗ್ರೂಪ್, ವಸ್ಸೇನಾರ್ ಅರೇಂಜ್ಮೆಂಟ್ನ ರಫ್ತು ನಿಯಂತ್ರಣ ಪರ್ವ ಸದಸ್ಯತ್ವಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎಂಟಿಸಿಆರ್ಗೆ ಭಾರತ ಸೇರ್ಪಡೆಗೊಂಡಲ್ಲಿ ಅಮೇರಿಕಾದಿಂದ ಪ್ರಿಡೇಟರ್ ಡ್ರೋನ್ಗಳನ್ನು ಖರೀದಿಸುವ ಹಾಗೂ ಭಾರತದಿಂದ ಇತರ ಮಿತ್ರ ರಾಷ್ಟ್ರಗಳಿಗೆ ಹೈಟೆಕ್ ಕ್ಷಿಪಣಿಗಳನ್ನು ರಫ್ತು ಮಾಡುವ ಭಾರತದ ಪ್ರಯತ್ನಕ್ಕೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.