ತಿರುವನಂತರಪುರಂ: ಕೇರಳ ರಾಜ್ಯ ಸರ್ಕಾರ ’ಶುಚಿತ್ವ ಮಿಷನ್’ ಆರಂಭಿಸಿದ್ದು, ನವೆಂಬರ್ ತಿಂಗಳ ಒಳಗಾಗಿ ಕೇರಳ ರಾಜ್ಯ ಬಯಲು ಶೌಚ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ಎಂ. ವಿಜಯಾನಂದ ಶುಚಿತ್ವ ಮಿಷನ್ನ ಕುರಿತು ಎಲ್ಲಾ ಮಧ್ಯವರ್ತಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯವು ತನ್ನ ಗುರಿಯನ್ನು ತಲುಪಲಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಬೇಕಿದೆ. ಈ ಮೂಲಕ ನವೆಂಬರ್ ತಿಂಗಳ ಒಳಗಾಗಿ ಬಯಲು ಶೌಚ ಮುಕ್ತ ರಾಜ್ಯವಾಗಲಿದೆ ಎಂದು ಹೇಳಿದ್ದಾರೆ.
ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೇಮ್ಸ್ ವರ್ಗೀಸ್ ಅವರು ಇಲಾಖೆ ವತಿಯಿಂದ ಅಗತ್ಯ ಬಂಡವಾಳ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳದಲ್ಲಿ ನೈರ್ಮಲ್ಯ ಸಂರಕ್ಷಣೆಗಾಗಿ ಶುಚಿತ್ವ ಮಿಷನ್ ಆರಂಭಿಸಲಾಗಿದೆ. ಇದು ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ ಮುಕ್ತ ಪರಿಸರಕ್ಕಾಗಿ ಕೇರಳ ರಾಜ್ಯದ ಸ್ಥಳೀಯ ಸರ್ಕಾರಿ ಇಲಾಖೆಯ ಅಡಿಯಲ್ಲಿ ರಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.