ವಾಷಿಂಗ್ಟನ್: ಐದು ರಷ್ಟ್ರಗಳ ಪ್ರವಾಸದ ವೇಳೆ ಅಮೇರಿಕಾಗೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಸಮಾರಂಭದ ಭಾಗವಾಗಿ ಭಾರತದ ಅತೀ ಪುರಾತನ ಕಾಲದ ಕಲಾಕೃತಿಗಳನ್ನು ಹಸ್ತಾಂತರಿಸಿದೆ.
ಬಾಹುಬಲಿ, ಗಣೇಶನ ಕಲಾಕೃತಿ ಸೇರಿದಂತೆ ಸುಮಾರು 200ಕ್ಕೂ ಅಧಿಕ ಕಲಾಕೃತಿಗಳನ್ನು ಅಮೇರಿಕಾ ಹಿಂದಿರುಗಿಸಿದ್ದು, ಪ್ರಧಾನಿ ಮೋದಿ ಅವರು ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅಮೇರಿಕಾ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ವರ್ತಮಾನದ ವಿಚಾರಗಳಲ್ಲದೇ ಪಾರಂಪರಿಕ ವಿಚಾರಗಳು ಕೂಡ ಎರಡು ರಾಷ್ಟ್ರಗಳನ್ನು ಸಮೀಪಿಸುತ್ತವೆ ಎಂದ ಮೋದಿ, ಈಗಾಗಲೇ ಹಲವು ರಾಷ್ಟ್ರಗಳು ಭಾರತದಿಂದ ಕಳುವಾಗಿದ್ದ ಕಲಾಕೃತಿಗಳನ್ನು ಹಿಂದಿರುಗಿಸಿವೆ. ಇದು ಭವಿಷ್ಯದಲ್ಲಿ ಭಾರತಕ್ಕೆ ಸ್ಫೂರ್ತಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.