ವಾಷಿಂಗ್ಟನ್: ಐದು ರಾಷ್ಟ್ರಗಳ ಪ್ರವಸದಲ್ಲಿರುವ ಪ್ರಧಾನಿ ನರೇಂದ್ರ ಅಮೇರಿಕಾದ ವಾಷಿಂಗ್ಟನ್ಗೆ ಬಂದಿಳಿದಿದ್ದು, ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮೂರು ದಿನಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಧ್ಯಕ್ಷ ಒಬಾಮಾ ಅವರ ಆಹ್ವಾನದ ಮೇರೆಗೆ ಅಮೇರಿಕಾ ಭೇಟಿ ನೀಡಿರುವ ಮೋದಿ ಅವರು ಜಂಟಿ ಸಂಸತ್ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಮೋದಿ ಅವರು ಆರ್ಥಿಕತೆ, ಇಂಧನ, ಪರಮಾಣು ಶಕ್ತಿ ಕುರಿತು ಮಾತುಕತೆ ನಡೆಸಲಿದ್ದಾರೆ.
ಅಲ್ಲದೇ ಅಮೇರಿಕಾದ ಶಾಸಕರು, ಅಮೇರಿಕಾದ ಖಾಸಗಿ ಕೈಗಾರಿಕೆಗಳ ನಾಯಕರು, ಅಲ್ಲಿನ ಥಿಂಕ್ ಟ್ಯಾಂಕ್ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಜೂನ್ 7ರಂದು ಅಧ್ಯಕ್ಷ ಒಬಾಮಾ ಜೊತೆಗಿನ ಮಾತುಕತೆಯಲ್ಲಿ ವಿಭಿನ್ನ ವಿಭಾಗಗಳಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ಚಟುವಟಿಕೆಗಳು ಮತ್ತು ಪ್ರಗತಿಯಲ್ಲಿ ವೇಗವನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಗುವುದು ಎಂದು ಮೋದಿ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಆರ್ಲಿಂಗ್ಟನ್ ನ್ಯಾಶನಲ್ ಸಮಾಧಿಗೆ ತೆರಳಿ ಯೋಧರು ಮತ್ತು ಭಾರತೀಯ ಮೇರಿಕನ್್್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರಿಗೂ 19 ಗನ್ ಸೆಲ್ಯೂಟ್ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.