×
Home About Us Advertise With s Contact Us

2025ರ ಒಳಗೆ ನಾರ್ವೇಯಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ

Cars-ban1
ಓಸ್ಲೋ: ನಾರ್ವೇ ರಾಷ್ಟ್ರದಲ್ಲಿ 2025ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳನ್ನು ನಿಷೇಧಿಸಲು ಅಥವಾ ಮಾರಾಟವನ್ನು ಕಡಿಮೆ ಮಾಡಲು ಅಲ್ಲಿಯ ಸಂಸದರು ಒಪ್ಪಿಗೆ ಸೂಚಿಸಿವುದಾಗಿ ಆರ್‌ಟಿ.ಕಾಂ ಹೇಳಿದೆ.

ತನ್ನ ಪಕ್ಷದ ಸಹವರ್ತಿ ಸಂಸದರು, ಪ್ರೋಗ್ರೆಸ್ ಪಕ್ಷ ಕ್ರಿಶ್ಚಿಯನ್ ಡೆಮೋಕ್ರಾಟ್ಸ್ ಹಾಗೂ ಕನ್ಸರ್ವೇಟಿವ್ ಪಕ್ಷದ ಸಂಸದರು ಈ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಲಿಬರಲ್ ಪಕ್ಷದ ಸಂಸದ ಒಲಾ ಎಲ್ವರ್ಸ್ಟ್‌ನ್ ಹೇಳಿದ್ದಾರೆ.

ರಾಷ್ಟ್ರೀಯ ಸಾರಿಗೆ ಯೋಜನೆ 2018-19ರ ಪ್ರಕಾರ ಕಾರುಗಳು, ವ್ಯಾನ್‌ಗಳು, ಬಸ್, ಭಾರೀ ಗಾತ್ರದ ವಾನಗಳು ಮುಂತಾದ ಪರಿಸರ ಹಾನಿಗೊಳಿಸುವ ಇಂಧನ ಚಾಲಿತ ವಾಹನಗಳನ್ನು ಕ್ರಮೇಣವಾಗಿ ನಿಷೇಧಿಸುವುದಾಗಿ ಹೇಳಲಾಗಿದೆ.

ನಾರ್ವೇಯಲ್ಲಿ ಶೇ.೨೪ರಷ್ಟು ವಿದ್ಯುತ್ ಚಾಲಿತ ರೈಲುಗಳಿದ್ದು, ವಿಶ್ವದಲ್ಲೇ ವಿದ್ಯುತ್ ಚಾಲಿತ ವಾಹನಗಳ ಅತ್ಯಧಿಕ ಮಾರುಕಟ್ಟೆ ಪಾಲು ಹೊಂದಿದೆ ಎಂದು ಹೇಳಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!