ವಾಷಿಂಗ್ಟನ್ : 5 ದೇಶಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೂ ತೆರಳಲಿದ್ದಾರೆ. ಜೂನ್ 8 ರಂದು ಯುಎಸ್ ಕಾಂಗ್ರೆಸ್ನ ಜಂಟಿ ಸದನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದು ಅವರ ಭಾಷಣಕ್ಕೆ ಅಮೆರಿಕಾದ ಜನತೆ ಕಾತುರದಿಂದ ಕಾಯುತ್ತಿದ್ದಾರೆ.
ಅಮೆರಿಕಾದ ಶಾಸಕರ ಒತ್ತಾಯದ ಮೇರೆಗೆ ಮೋದಿ ಜಂಟಿ ಸದನದಲ್ಲಿ ಭಾಷಣ ಮಾಡುತ್ತಿದ್ದಾರೆ. ಇದನ್ನು ಕೇಳಲು ಅಲ್ಲಿನ ಭಾರತೀಯ ಸಮುದಾಯ ತುಂಬಾ ಉತ್ಸುಹುಕವಾಗಿದ್ದು ಸದನದ ಗ್ಯಾಲರಿಯ ಟಿಕೆಟ್ಗಾಗಿ ಮುಗಿ ಬೀಳುತ್ತಿದ್ದಾರೆ. ಟಿಕೆಟ್ ಪಡೆಯಲು ವಿಫಲರಾದವರು ನಿರಾಸರಾಗಿದ್ದಾರೆ.
ಮೋದಿ ಅವರು ಮಾತನಾಡುವುದನ್ನು ನೇರವಾಗಿ ನೋಡಬೇಕು ಎಂಬ ಕಾರಣಕ್ಕೆ ಅಮೆರಿಕಾದ ಮೂಲೆ ಮೂಲೆಯಲ್ಲಿನ ಭಾರತೀಯರು ವಾಷಿಂಗ್ಟನ್ ಡಿಸಿಗೆ ಆಗಮಿಸುತ್ತಿದ್ದಾರೆ.
ಸಿ-ಸ್ಪಾನ್, ಕೇಬಲ್, ಸೆಟ್ಲೈಟ್ ಹೀಗೆ ಎಲ್ಲದರಲ್ಲೂ ಮೋದಿಯವರ ಭಾಷಣ ನೇರ ಪ್ರಸಾರಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.