ನ್ಯೂಯಾರ್ಕ್: ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಅವರ ಟ್ವಿಟರ್ ಹಾಗೂ ಪಿಂಟರೆಸ್ಟ್ ಅಕೌಂಟ್ಗಳನ್ನು ’ಅವರ್ಮೈನ್’ ತಂಡ ಹ್ಯಾಕ್ ಮಾಡಿದೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಲಿಂಕ್ಡ್ಇನ್ ಜಾಲತಾಣದ ಡಾಟಾ ಉಲ್ಲಂಘನೆಯಿಂದಾಗಿ 117 ಕೋಟಿ ಜನರ ಅಕೌಂಟ್ಗಳು ಅಪಾಯಕ್ಕೆ ಸಿಲುಕಿದ್ದವು.
ಇದೇ ವೇಳೆ ಜುಕರ್ಬರ್ಗ್ ಅವರು ‘ಡಡಡ’ ಎಂಬ ಪಾಸ್ವರ್ಡ್ನೊಂದಿಗೆ ಲಿಂಕ್ಡ್ಇನ್ ಅಕೌಂಟ್ ಹೊಂದಿರುವುದಾಗಿ ಹ್ಯಾಕರ್ಗಳ ತಂಡ ಜುಕರ್ಬರ್ಗ್ ಅವರ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿದೆ (“Hey @finkd, you were in Linkedin Database with the password ‘dadada). ಜುಕರ್ಬರ್ಗ್ ಅವರ ಪಿಂಟರೆಸ್ಟ್ ಅಕೌಂಟ್ ‘Hacked by OurMine Team’ ನಾಮಫಲಕ ನೀಡಲಾಗಿದೆ.
ಜುಕರ್ಬರ್ಗ್ ಅವರ ಇನ್ಸ್ಟಾಗ್ರಾಂ ಅಕೌಂಟ್ನ್ನು ಕೂಡ ಹ್ಯಾಕ್ ಮಾಡಿದೆ ಎಂದಿರುವ ’ಅವರ್ಮೈನ್’, ನಿಮ್ಮ ಅಕೌಂಟ್ನ ಭದ್ರತೆಯನ್ನು ಪರೀಕ್ಷಿಸಲು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದೆ.
ಆದರೆ ಜುಕರ್ಬರ್ಗ್ ಅವರ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿಲ್ಲ ಎಂದು ವೆಂಚರ್ಬೀಟ್ ವರದಿ ತಿಳಿಸಿದೆ.
ಲಿಂಕ್ಡ್ಇನ್ ಅಕೌಂಟ್ಗಳನ್ನು ’ಪೀಸ್’ ಎಂಬ ತಂಡ ಹ್ಯಾಕ್ ಮಾಡಿರುವುದಾಗಿ ಹೇಳಲಾಗಿದ್ದು, ಸುಮಾರು 360 ಮಿಲಿಯನ್ ಜನರ ’ಮೈಸ್ಪೇಸ್’ ಅಕೌಂಟ್ಗಳ ಪಾಸ್ವರ್ಡ್ಗಳನ್ನು ಕದಿಯಲಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.