ಚಂಡೀಗಢ: ಸಿಖ್ಖರ ಸ್ವರ್ಣ ದೇಗುಲದ ಮೇಲೆ ಆಪರೇಶನ್ ಬ್ಲೂಸ್ಟಾರ್ ನಡೆದು ಸೋಮವಾರಕ್ಕೆ 32 ವರ್ಷಗಳು ತುಂಬುತ್ತವೆ. ಈ ಹಿನ್ನಲೆಯಲ್ಲಿ ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸಿಖ್ಖ್ ಹಾರ್ಡ್ಲೈನ್ ಗ್ರೂಪ್ ಖಲ್ಸಾ ಅಮೃತಸರ ಬಂದ್ಗೆ ಇಂದು ಕರೆ ನೀಡಿದೆ.
ಈ ಬಂದ್ ದೇಗುಲವನ್ನು ಅಪವಿತ್ರಗೊಳಿಸಿದ್ದರ ವಿರುದ್ಧ, ಮುಗ್ಧರ ಹತ್ಯೆಯ ವಿರುದ್ಧ ಮತ್ತು ಸಿಖ್ ಲೈಬ್ರರಿಯಿಂದ ಪವಿತ್ರ ಗ್ರಂಥಗಳನ್ನು ಲೂಟಿ ಮಾಡಿದುದರ ವಿರುದ್ಧ ಎಂದು ದಾಲ್ ಖಲ್ಸಾ ವಕ್ತಾರ ಕನ್ವರ್ ಪಾಳ್ ಸಿಂಗ್ ಹೇಳಿಕೊಂಡಿದ್ದಾರೆ.
ಆಪರೇಶನ್ ಬ್ಲೂಸ್ಟಾರ್ ವರ್ಷಾಚರಣೆಯ ಹಿನ್ನಲೆಯಲ್ಲಿ ಪಂಜಾಬ್ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 8 ಸಾವಿರ ಪೊಲೀಸರು, 6 ಪ್ಯಾರಾ ಮಿಲಿಟರಿ ಕಂಪನಿಗಳ ಸರ್ಪಗಾವಲು ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವರನ್ನು ಬಂಧಿಸಲಾಗಿದೆ.
ಆಪರೇಶನ್ ಬ್ಲೂಸ್ಟಾರ್ ಐತಿಹಾಸಿಕ ಮಿಲಿಟರಿ ಕಾರ್ಯಾಚರಣೆಯಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಂತರಿಕ ಅಭದ್ರತೆಯ ಕಾರಣವೊಡ್ಡಿ ದೇಗುಲದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಇದನ್ನು ನಡೆಸಿದ್ದರು, ಇದರಲ್ಲಿ 1 ಸಾವಿರ ಮಂದಿ ಮೃತರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.