ಜಿನಿವಾ: ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸ್ವಿಟ್ಜರ್ಲ್ಯಾಂಡ್ಗೆ ಆಗಮಿಸಿದ್ದಾರೆ. ಕಪ್ಪು ಹಣ ಮತ್ತು ಎನ್ಎಸ್ಜಿ ಸದಸ್ಯತ್ವ ಪಡೆಯುವುದರೊಂದಿಗೆ ದಿಪಕ್ಷೀಯ ಹಾಗೂ ಬಹುಪಕ್ಷೀಯ ಸಹಕಾರ ನಿರ್ವಹಿಸುವ ಕುರಿತು ಸ್ವಿಸ್ ಅಧ್ಯಕ್ಷ ಜೊಹಾನ್ ಷ್ನೇಯ್ಡರ್ ಅಮ್ಮಾನ್ ಜೊತೆ ಮಾತುಕತೆ ನಡೆಸಲಿದ್ದಾರೆ.
ಯೂರೋಪ್ನಲ್ಲೇ ಸ್ವಿಟ್ಜರ್ಲ್ಯಾಂಡ್ ಭಾರತದ ಪ್ರಮುಖ ಪಾಲುದಾರಿಕೆ ಹೊಂದಿದೆ. ಸ್ವಿಸ್ ಅಧ್ಯಕ್ಷ ಜೊಹಾನ್ ಷ್ನೇಯ್ಡರ್ ಅಮ್ಮಾನ್ ಜೊತೆ ಮಾತುಕತೆ ನಡೆಸಲಿದ್ದು, ಜಿನಿವಾದಲ್ಲಿ ಪ್ರಮುಖ ಉದ್ದಿಮೆದಾರರನ್ನು ಭೇಟಿಯಾಗಲಿದ್ದೇನೆ. ಆರ್ಥಿಕತೆ ಮತ್ತು ಹೂಡಿಕೆ ವಿಸ್ತರಿಸುವುದು ನಮ್ಮ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಲ್ಲಿಯ ಸಿಇಆರ್ಎನ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ವಿಜ್ಞಾನಿಗಳನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ ಅವರು ಮಾನವೀಯ ಸೇವೆಗೆ ವೈಜ್ಞಾನಿಕ ಗಡಿ ಅನ್ವೇಷಿಸುವ ಹೊಸ ಕಾರ್ಯದ ಕೊಡುಗೆ ಬಗ್ಗೆ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಎಸ್ಜಿಯ 48 ಸದಸ್ಯ ರಾಷ್ಟ್ರಗಳ ಗುಂಪಿನಲ್ಲಿ ಸದಸ್ಯತ್ವ ಪಡೆಯಲು ಸ್ವಿಟ್ಜರ್ಲ್ಯಾಂಡ್ನ ಬೆಂಬಲ ಕೋರಲಿದ್ದಾರೆ.
ಅನಂತರ ಮೋದಿ ಅವರು ಸ್ವಿಟ್ಜರ್ಲ್ಯಾಂಡ್ನಿಂದ ಮೆಕ್ಸಿಕೋ ಪ್ರವಾಸ ಕೈಗೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಮೋದಿ ಅವರು ಅಫ್ಘಾನಿಸ್ಥಾನ ಹಾಗೂ ಕತಾರ್ ಪ್ರವಾಸ ಕೈಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.