ನವದೆಹಲಿ: ಕೇಂದ್ರದಲ್ಲಿ ಎರಡು ವರ್ಷದ ಆಡಳಿತ ಪೂರೈಸಿರುವ ಮೋದಿ ಸರ್ಕಾರ ಜನಪ್ರಿಯತೆ ಗಳಿಸುತ್ತಿದೆ. ಇನ್ನು ಕೇಂದ್ರ ಸರ್ಕಾರದ ಆಡಳಿತದ ಕಾರ್ಯಕ್ಷಮತೆ ಮತ್ತು ಪ್ರಚಾರದ ಕುರಿತು ಜನರ ಅಭಿಪ್ರಾಯ ಕೋರಿ ಕೇಂದ್ರವು ದೇಶದ ನಾಗರಿಕರಿಗೆ 94 ಕೋಟಿ ಇಮೇಲ್ಗಳನ್ನು ಕಳುಹಿಸಿದೆ. ಇದಕ್ಕೆ ಹೆಚ್ಚಿನ ಪ್ರತಿಕ್ರಿಯೆ ಪಡೆದಲ್ಲಿ ಮೋದಿ ಸರ್ಕಾರದ ಜನಪ್ರಿಯತೆ ಇನ್ನಷ್ಟು ಬೆಳೆಯಲಿದೆ.
ಮುಂಬಯಿಯಲ್ಲಿ ಮಾರ್ಚ್ನಲ್ಲಿ ನಡೆದ ’ಮೇಕ್ ಇನ್ ಇಂಡಿಯಾ’ ವೀಕ್ನಲ್ಲಿ ಭಾಗವಹಿಸಿದ 46,000 ಜನರಿಗೆ ಕೇಂದ್ರ ಅಭಿನಂದನೆ ಸಲ್ಲಿಸಿ ಇಮೇಲ್ಗಳನ್ನು ಕಳುಹಿಸಿದ್ದು, ಶೇ.96 ಮಂದಿ ಇಮೇಲ್ಗಳನ್ನು ಓದಿದ್ದಾರೆ. ಕೇಂದ್ರ ಸರ್ಕಾರ ನಡೆಸಿದ 217 ಇಮೇಲ್ ಅಭಿಯಾನಗಳಲ್ಲಿ ಇದು ಅತೀ ಯಶಸ್ವಿ ಅಭಿಯಾನವಾಗಿದೆ ಎನ್ನಲಾಗಿದೆ.
ನವೇಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಿಂಗಾಪುರ್-ಮಲೇಷ್ಯಾ ಪ್ರವಾಸದ ವೇಳೆ ಮೋದಿ ಅವರನ್ನು ಅನುಸರಿಸುವಂತೆ 76.14 ಲಕ್ಷ ಇಮೇಲ್ಗಳನ್ನು ಕಳುಹಿಸಲಾಗಿದ್ದು, ಶೇ.12ರಷ್ಟು ಓದುಗರನ್ನು ಹೊಂದಿತ್ತು. ಆದರೆ ಒಟ್ಟಾರೆ ಅವರ ಎಲ್ಲಾ ಅಭಿಯಾನಗಳ ಯುಆರ್ಎಲ್ ಕ್ಲಿಕ್ ಮಾಡಿದ ಗರಿಷ್ಠ 92,000 ಓದುಗರನ್ನು ಹೊಂದಿದೆ.
ಜನವರಿ ತಿಂಗಳಿನಲ್ಲಿ ಡಿಜಿಟಲ್ ಇಂಡಿಯಾ ನ್ಯೂಸ್ಲೆಟರ್ ಭಾಗವಾಗಿ ಕಳುಹಿಸಲಾದ 79 ಲಕ್ಷ ಇಮೇಲ್ಗಳಲ್ಲಿ ಶೇ.15ರಷ್ಟು ಓದುಗರ ಸಂಖ್ಯೆ ಏರಿಕೆಯೊಂದಿಗೆ ಒಟ್ಟು 80,000 ಓದುಗರನ್ನು ಹೊಂದಿತ್ತು. ’ಗುಡ್ ಗವರ್ನೆನ್ಸ್ ಡೇ’ ದಿನದಂದು ಶೇ.32, ಫೆಬ್ರವರಿಯಲ್ಲಿ ರೈಲು ಬಜೆಟ್ ಸಂಬಂಧಿಸಿ ಕಳುಹಿಸಿದ ಇಮೃಲ್ಗಳಿಗೆ ಶೇ.32ರಷ್ಟು ಓದುಗರನ್ನು ಹೊಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.