ನವದೆಹಲಿ : ಎನ್ಎಸ್ಜಿ ಪಟ್ಟಿಯಲ್ಲಿ ಸೇರ್ಪಡೆಯಾಗಲು ಸರಕಾರ ಈ ಹಿಂದೆ ಕ್ಷಿಪಣಿ ತಂತ್ರಜ್ಞಾನ ಪ್ರಸರಣ ತಡೆ ಒಪ್ಪಂದ ಮಾಡಿಕೊಂಡಿದ್ದು, ಅದು ಸಹಕಾರಿಯಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಜೂನ್ 4 ರಂದು ಐದು ದೇಶಗಳ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ಭಾರತದ ನಿಲುವಿಗೆ ಮತ್ತು ಎನ್ಎಸ್ಜಿ ಪಟ್ಟಿಗೆ ಸೇರುವಲ್ಲಿ ವಿಶ್ವಮಟ್ಟದಲ್ಲಿ ಬೆಂಬಲ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಭಾರತ 2002 ರಲ್ಲಿ ಕ್ಷಿಪಣಿ ತಂತ್ರಜ್ಞಾನ ಪ್ರಸರಣ ತಡೆಗೆ ಸಹಿ ಹಾಕಿದ್ದು, ಭಾರತದ ಈ ನಿಲುವು ದೇಶದ ಪರ ಮಾತನಾಡುವಲ್ಲ್ಲಿ ಜಾಗತಿಕ ಮಟ್ಟದಲ್ಲಿ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಭಾರತ ಎನ್ಎಸ್ಜಿ ಪಟ್ಟಿಗೆ ಸೇರಿಸಲು ಪಾಕ್ ಮತ್ತು ಚೀನಾ ಅಡ್ಡಿಪಡಿಸುತ್ತಿದ್ದು, ಭಾರತವನ್ನು ಇದರಿಂದ ಹೊರಗುಳಿಯುವಂತೆ ಮಾಡಲು ತಂತ್ರ ರೂಪಿಸುತ್ತಿದೆ. ಇನ್ನೊಂದೆಡೆ ಚೀನಾ ಪಾಕ್ಗೆ ಅಣುವಸ್ತ್ರ ತಂತ್ರಜ್ಞಾನವನ್ನು ನೀಡಿ ಸಹಾಯಮಾಡುತ್ತಿದೆ.
ಅಣುವಸ್ತ್ರ ತಂತ್ರಜ್ಞಾನಗಳೇನಾದರೂ ಪಾಕ್ ಭಯೋತ್ಪಾದಕರ ಕೈವಶವಾದಲ್ಲಿ ಜಾಗತಿಕ ವಲಯದಲ್ಲಿ ಆತಂಕ ಹೆಚ್ಚಾಗಲಿದೆ ಎಂಬುದು ರಾಜತಾಂತ್ರಿಕರ ಅಂಬೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.