ಬೆಳ್ತಂಗಡಿ : ಶಾಲೆ ಕಡೆ ನನ್ನ ನಡೆ, ಶಿಕ್ಷಣ ನನ್ನ ಮೂಲಭೂತ ಹಕ್ಕು, ಶಾಲೆ ಬಿಟ್ಟು ಮನೆಯಲ್ಲಿರುವ 14 ವರ್ಷದ ತನಕದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ವಿಶಿಷ್ಠ ಆಂದೋಲನವು ಬೆಳ್ತಂಗಡಿಯಲ್ಲಿ ಜರಗಿತು.
ಬೆಳ್ತಂಗಡಿ ಜೆಸಿಐ ಘಟಕಾಧ್ಯಕ್ಷ ವಸಂತ ಶೆಟ್ಟಿ, ನಪಂ ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷೆ ಸುಶೀಲಾ ಎಸ್. ಹೆಗ್ಡೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸಾಟಿಯ ಸುಧಾಭಿರಾಮ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಯಶೋಧಾ, ನಾಗವೇಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಆರ್.ಪಿ. ಮಂಜುಳಾ ಜೆ.ಟಿ., ತಾಲೂಕು ಕಾನೂನು ಸೇವಾ ಸಮಿತಿಯ ಪ್ರೇಮಲತಾ, ನಳಿನಿ, ಬೆಳ್ತಂಗಡಿ ಜೆಸಿಐ ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸುದೆಮುಗೇರು ಅಂಗನವಾಡಿ ಕಾರ್ಯಕರ್ತೆ ಕೆ. ವೀಣಾ ಎನ್. ಆಂದೋಲದಲ್ಲಿ ಭಾವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.