ಬೆಂಗಳೂರು : ಒಂದೇ ಸೂರಿನಡಿಯಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಹಬ್ಬದ ದಿಬ್ಬಣ. ಅಲ್ಲಿ ಸಂಗೀತವಿದೆ. ನೃತ್ಯವಿದೆ. ನೃತ್ಯ ರೂಪಕವಿದೆ. ಹಾಸ್ಯವಿದೆ. ಅತಿರಥ ಮಹಾರಥ ಕಲಾವಿದರು, ಸಂಗೀತ ಲೋಕದ ದಿಗ್ಗಜರ ಒಟ್ಟು ಸೇರುವಿಕೆಯಿದೆ, ಹೆಸರು ಕಲಾರ್ಣವ. ಅರ್ಥಾತ್ ಕಲಾಸಾಗರ.
ಜೂನ್ 4 ಮತ್ತು 5 ಶನಿವಾರ ಭಾನುವಾರದಂದು ಬೆಂಗಳೂರಿನ ಜನತೆಗೆ ಇದು ವೀಕೆಂಡ್ ವಿಶೇಷ. ವರ್ಷದಿಂದ ವರ್ಷಕ್ಕೆ ಹಲವು ಹೊಸತನಗಳ ಮೂಲಕ ಸಂಗೀತ, ಸಾಂಸ್ಕೃತಿಕ ಆಸಕ್ತರು ಹುಬ್ಬೇರುವಂತೆ ಮಾಡುವ `ಕಲಾರ್ಣವ-2016′ ಅನ್ನು ನಗರದ ಕುಮಾರಸ್ವಾಮಿ ಲೇಔಟ್ನಲ್ಲಿರುವ ದಯಾನಂದ ಸಾಗರ್ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ನಗರದ `ಗೋಕುಲಂ’ ಸಂಗೀತ ಶಾಲೆ ಈ ಕಾರ್ಯಕ್ರಮದ ಪ್ರೇರಕ ಶಕ್ತಿ. ದಿನವಿಡೀ ನಡೆಯುವ ಈ ಸಾಂಸ್ಕೃತಿಕ ಉತ್ಸವದಲ್ಲಿ ಹಿರಿಯ- ಕಿರಿಯ ಸಂಗೀತಗಾರರು ನೃತ್ಯಕಲಾವಿದರು ಕಲೆಯ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ.
ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್, ದಯಾನಂದ ಸಾಗರ್ ಯುನಿವರ್ಸಿಟಿ ಮತ್ತು ಡಾ. ಡಿ.ಪ್ರೇಮಚಂದ್ರ ಸಾಗರ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ಸಹಯೋಗದಲ್ಲಿ `ಗೋಕುಲಂ’ ಸಂಗೀತ ಶಾಲೆ ಈ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಸಿದ್ದತೆ ನಡೆಸುತ್ತಿದೆ. `ಗೋಕುಲಂ’ ಸಂಗೀತ ಶಾಲೆ, ಖ್ಯಾತ ಕೊಳಲುವಾದಕರಾದ ವೇಣುಗೋಪಾಲ್ ಅವರ ಪರಿಕಲ್ಪನೆಯ ಕೂಸು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.