ಬೆಳ್ತಂಗಡಿ : ಜೂನ್ 4 ರಂದು ಸಾರ್ವತ್ರಿಕ ರಜೆ ಮಾಡಿ ಸರಕಾರದ ವಿರುದ್ದ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ ಪೋಲೀಸರನ್ನು ಅಭಿನಂದಿಸಿದ, ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿಯು ಅವರ ಹೋರಾಟಕ್ಕೆ ಬೆಂಬಲ ಘೋಷಿಸಿದೆ ಎಂದುತಾಲೂಕು ಅಧ್ಯಕ್ಷರಾದ ಧನಂಜಯಗೌಡ, ಕಾರ್ಯದರ್ಶಿ ವಿಠಲ ಮಲೆಕುಡಿಯಾ, ಮುಖಂಡರಾದ ಲಾರೆನ್ಸ್, ಜಕಾರಿಯಾ, ಮೊದಲಾದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿ ಸಭೆ ಸೇರಿ ಈ ಬಗ್ಗೆ ಚರ್ಚಿಸಿ ಈ ನಿರ್ಣಯಕೈಗೊಂಡಿದೆ ಎಂದು ಅವರು ತಿಳಿಸಿದರು. ಪೋಲೀಸರು 24 ಗಂಟೆ ದುಡಿದರೂ ದೇಶದ ಜನರ ರಕ್ಷಣೆಗಾಗಿ ಹೆಣಗಾಡಿದರೂ, ಅವರ ರಕ್ಷಣೆಯ ಬಗ್ಗೆ ರಾಜ್ಯದಯಾವುದೇ ಸರಕಾರವೂ ಗಮನ ನೀಡಿಲ್ಲ. ಯಾವುದೇ ಸಂಘಟನೆ ಮಾಡದಂತೆ, ಹೋರಾಟ ಮಾಡದಂತೆ ನಿರ್ಬಂಧಿಸಿದ ಸರಕಾರ ಅವರ ಬದುಕಿನ ಬಗ್ಗೆ ಚಿಂತಿಸದೇ ಇರುವುದೇ ಅವರು ಇಂದು ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆಗೆ ಬಂದಿರುವುದು.
ಸರಿಯಾದ ಸವಲತ್ತು, ವಿಶ್ರಾಂತಿ, ವೇತನಗಳು ಸಿಗಬೇಕಾದ್ದು ಶ್ರಮಿಕರ ಮುಖ್ಯ ಬೇಡಿಕೆ. ಪೋಲೀಸರ ಬೇಡಿಕೆಗಳೂ ಮನುಷ್ಯರಾದವರ ಮೂಲಭೂತ ಸವಲತ್ತುಗಳ ಬೇಡಿಕೆಗಳಾಗಿವೆ. ಅವರ ಹೋರಾಟಕ್ಕೆ ಡಿ.ವೈ.ಎಫ್.ಐ.ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ರಾಜ್ಯ ಸಮಿತಿ ಈಗಾಗಲೇ ತಿಳಿಸಿದೆ. ಬೆಳ್ತಂಗಡಿ ತಾಲೂಕು ಸಮಿತಿ ಸಬೆ ಸೇರಿ ಪೋಲೀಸರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿ ನಿರ್ಣಯಕೈಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.