ಲಕ್ನೋ: ಉತ್ತರಪ್ರದೇಶ ಸರ್ಕಾರ ತನ್ನ ನೌಕರರಿಗೆ ರಜೆಗಳ ಮಹಾಪೂರವನ್ನೇ ಹರಿಸಿದೆ. ಮುಂದಿನ ವರ್ಷದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 3 ಹೆಚ್ಚಿನ ರಜೆಗಳನ್ನು ಅದು ಘೋಷಿಸಿದೆ. ಇದರಿಂದಾಗಿ ಇನ್ನು ಮುಂದೆ ಅಲ್ಲಿನ ಸರ್ಕಾರಿ ನೌಕರರು ವರ್ಷದಲ್ಲಿ ಕೇವಲ ಆರು ತಿಂಗಳು ಕೆಲಸ ಮಾಡಿದರೆ ಸಾಕು, ಉಳಿದ ದಿನವನ್ನು ಆರಾಮದಲ್ಲಿ ಮನೆಯಲ್ಲೇ ಕಳೆಯಬಹುದಾಗಿ. ಅದೂ ಕೂಡ ಸಂಪೂರ್ಣ ಸಂಬಳದೊಂದಿಗೆ.
ಮಾಜಿ ಪ್ರಧಾನಿ ಚರಣ್ ಸಿಂಗ್, ಚಂದ್ರಶೇಖರ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಹೊಸದಾಗಿ ರಜೆಯನ್ನು ಘೋಷಿಸಿದ್ದಾರೆ. ಇದರಿಂದ ಉತ್ತರಪ್ರದೇಶದಲ್ಲಿ ಸರ್ಕಾರಿ ರಜೆಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ವಿಧಾನ ಸಭಾ ಮತ್ತು ಇಲಾಖೆಗಳ ಪ್ರಧಾನ ಕಚೇರಿ ಸಿಬ್ಬಂದಿಗೆ ವಾರದಲ್ಲಿ 5 ದಿನ ಕೆಲಸ, ಜಿಲ್ಲಾ ಮಟ್ಟದ ನೌಕರರಿಗೆ ತಿಂಗಳಿಗೆ ಮೂರು ದಿನ ರಜೆಯ ಜೊತೆಗೆ 2 ದಿನ ಹೆಚ್ಚುವರಿ ರಜೆ ನೀಡಲಾಗಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಸರ್ಕಾರಿ ನೌಕರರಿಗೆ ಭಾನುವಾರ ಹಾಗೂ ಇತರೆ ಸಾಂದರ್ಭಿಕ ರಜೆ ಸೇರಿದಂತೆ ವರ್ಷದಲ್ಲಿ ಅರ್ಧದಷ್ಟು ರಜಾ ದಿನಗಳು ದೊರೆಯಲಿವೆ. ಈ ರೀತಿ ಸರ್ಕಾರಗಳು ಜನರನ್ನು ಎಳೆಯಲು ಬೇಕಾಬಿಟ್ಟಿ ರಜೆ ಘೋಷಿಸಿದರೆ ಈ ದೇಶದ ಆರ್ಥಿಕ ಸ್ಥಿತಿ ಅದೋಗತಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.