ನವದೆಹಲಿ: ‘ಸಿವಿಲ್ ಸರ್ವಿಸ್ ಡೇ’ಯ ಅಂಗವಾಗಿ ಮಂಗಳವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗಹಿಸಿದ ಪ್ರಧಾನಿ ನರೇಂದ್ರ ಮೋದಿ, ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಸಾಧನೆಗೈದ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ವೈಯಕ್ತಿಕ, ಗುಂಪು ಮತ್ತು ಸಂಘಟನೆ ಈ ಮೂರು ಸಾರ್ವಜನಿಕ ಆಡಳಿತ ವಿಭಾಗವನ್ನು ಪ್ರತಿಷ್ಟಿತ ಪ್ರಧಾನಮಂತ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪದಕ, ನಗದು ಮತ್ತು ಸ್ಕ್ರಾಲ್ನ್ನು ಈ ಪ್ರಶಸ್ತಿ ಹೊಂದಿದೆ.
ಈ ಸಮಾರಂಭದಲ್ಲಿ ಮೋದಿ ‘ಬೆಸ್ಟ್ ಪ್ರಾಕ್ಟೀಸ್-ಟುಮಾರೋ ಈಸ್ ಹಿಯರ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಈ ವೇಳೆ ಮಾತಮಾಡಿದ ಅವರು ‘ಹೊಣೆಗಾರಿಕೆ, ಜವಾಬ್ದಾರಿ ಮತ್ತು ಪಾರದರ್ಶಕತೆ ಉತ್ತಮ ಸರ್ಕಾರದ ಕಲೆಯಾಗಿರುತ್ತದೆ. ‘ಶೀಲಂ ಪರಮ್ ಭೂಷಣಂ’ಎಂಬ ತತ್ವವನ್ನು ನಾನು ಹೋದ ಕಡೆಯೆಲ್ಲ ಹೊತ್ತುಕೊಂಡು ಹೋಗುತ್ತೇನೆ’ ಎಂದರು.
‘ಸಿವಿಲ್ ಸರ್ವಿಸ್ನಲ್ಲಿರುವವರು ತಮ್ಮ ಕುಟುಂಬ ಮತ್ತು ವೃತ್ತಿಕಾರ್ಯವನ್ನು ಸಮತೋಲನ ಮಾಡಬೇಕು. ಕುಟುಂಬದೊಂದಿಗೆ ಸಮಯ ಕಳೆಯಬೇಕು, ನಿಮ್ಮ ಜೀವನ ರೋಬೋಟ್ನಂತಾದರೆ ಅದು ಸರ್ಕಾರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.