×
Home About Us Advertise With s Contact Us

ಭೂಗತ ಪಾತಕಿ ಇಜಾಝ್ ಲಕ್ಡಾವಾಲ ಬಂಟನ ಸೆರೆ

policeನವದೆಹಲಿ: ಭೂಗತ ಪಾತಕಿ ಇಜಾಝ್ ಲಕ್ಡಾವಾಲನ ಬಲಗೈ ಬಂಟ ಮೊಹಮ್ಮದ್ ಯೂಸುಫ್‌ನನ್ನು ಬುಧವಾರ ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಉದ್ಯಮಿಗಳನ್ನು ಹತ್ಯೆ ಮಾಡಲು ಈತ ಸಂಚು ರೂಪಿಸಿದ್ದ, ಅಲ್ಲದೇ ಇದಕ್ಕಾಗಿ ಪಂಜಾಬ್‌ನ ಇಬ್ಬರು ಶಾರ್ಪ್ ಶೂಟರ್‍ಸ್‌ಗಳನ್ನು ನಿಯೋಜಿಸುವಂತೆ ಲಕ್ಡಾವಾಲ ಈತನಿಗೆ ತಿಳಿಸಿದ್ದ ಎನ್ನಲಾಗಿದೆ.

ವಿದೇಶದಲ್ಲಿದ್ದುಕೊಂಡು ತನ್ನ ಬಂಟರ ನೆರವಿನೊಂದಿಗೆ ಲಕ್ಡಾವಾಲ ಹಲವಾರು ಕೃತ್ಯಗಳನ್ನು ಎಸಗಿದ್ದಾನೆ. ಈ ಹಿಂದೆ ಈತ ದಾವೂಡ್ ಆಪ್ತನಾಗಿದ್ದ ಬಳಿಕ ಮನಸ್ತಾಪದಿಂದ ದೂರವಾಗಿ ಸ್ವಂತವಾಗಿ ಪಾತಕ ಜಗತ್ತನ್ನು ನಡೆಸಲು ಮುಂದಾದ.

ಈತನ ಮೇಲೆ ದಾವೂದ್ ದಾಳಿಯನ್ನೂ ನಡೆಸಿದ್ದ ಆದರೆ ಅದರಿಂದ ಹೇಗೋ ಬಚಾವಾಗಿ ಬಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದ.

 

Recent News

Back To Top
error: Content is protected !!