ಹೈದರಾಬಾದ್: ತನ್ನ ನಾಲ್ಕು ಮಂದಿ ಶಾಸಕರನ್ನು ಪ್ರಗತಿಪರ ರೈತರು ಎಂದು ಬಿಂಬಿಸಿ ಇಸ್ರೇಲ್ಗೆ ಪ್ರವಾಸಕ್ಕೆ ಕಳುಹಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದಕ್ಕೆ ದೇಶದೆಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಎ.27ರಿಂದ ಇಸ್ರೇಲ್ನ ಟೆಲ್ ಅವೀವ್ನಲ್ಲಿ 19ನೇ ಅಂತಾರಾಷ್ಟ್ರೀಯ ಕೃಷಿ ಮೇಳ ನಡೆಯಲಿದೆ. ಇದರಲ್ಲಿ ಈ ನಾಲ್ಕು ಮಂದಿ ಶಾಸಕರು ಭಾಗಿಯಾಗಲಿದ್ದಾರೆ.
ಈ ನಾಲ್ಕು ಟಿಆರ್ಎಸ್ ಪಕ್ಷದ ಶಾಸಕರು ಪ್ರಗತಿಪರ ಕೃಷಿಕರು, ಇವರು ಹನಿ ನೀರಾವರಿ ಮತ್ತು ಸಾವಯವ ಕೃಷಿಗೆ ಸಾಕಷ್ಟು ಪ್ರೇರಣೆ ನೀಡಿದ್ದಾರೆ ಎಂದು ತೆಲಂಗಾಣದ ಕೃಷಿ ಸಚಿವಾಲಯ ಹೇಳಿದೆ.
ಆದರೆ ಇವರಿಗೆ ಕೃಷಿ ಹಿನ್ನಲೆಯೇ ಇಲ್ಲ ಎಂದು ತೆಲಂಗಾಣದ ಮಾಧ್ಯಮಗಳು ವರದಿ ಮಾಡಿವೆ.
ಶಾಸಕರನ್ನು ಕೃಷಿಕರು ಎಂದು ಬಿಂಬಿಸುವ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ರೈತರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷಗಳು ಆರಂಭಿಸಿವೆ.
ಅಕಾಲಿಕ ಮಳೆಯಿಂದಾಗಿ ನೂರಾರು ರೈತರು ತೆಲಂಗಾಣದಲ್ಲಿ ಬೀದಿಗೆ ಬಿದ್ದಿದ್ದಾರೆ. ಅವರ ಎಕರೆಗಟ್ಟಲೆ ಹೊಲದಲ್ಲಿದ್ದ ಬೆಳೆಗಳು ನಷ್ಟವಾಗಿವೆ. ಆದರೂ ಸರ್ಕಾರ ಮಾತ್ರ ರೈತರ ವಿಷಯದಲ್ಲಿ ಚೆಲ್ಲಾಟವಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.