ಸೋನಿಪತ್: ಹರಿಯಾಣ ಸರ್ಕಾರದಿಂದ ಸಂಪುಟ ದರ್ಜೆಯ ಸ್ಥಾನಮಾನ ಪಡೆಯುವುದಕ್ಕೆ ಯೋಗಗುರು ಬಾಬಾ ರಾಮ್ದೇವ್ ನಿರಾಕರಿಸಿದ್ದಾರೆ.
ಹರಿಯಾಣದ ಯೋಗ ಮತ್ತು ಆರ್ಯುವೇದ ರಾಯಭಾರಿಯಾಗಿ ರಾಮ್ದೇವ್ ಅವರನ್ನು ಅಲ್ಲಿನ ಸರ್ಕಾರ ನಿಯೋಜಿಸಿದೆ. ಹೀಗಾಗೀ ಅವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಲು ಅದು ನಿರ್ಧರಿಸಿತ್ತು.
ಇದೀಗ ಸ್ವತಃ ರಾಮ್ದೇವ್ ಅವರೇ ತಮಗೆ ಸಂಪುಟ ದರ್ಜೆಯ ಸ್ಥಾನಮಾನ ಬೇಡ ಎಂದು ಸೋನಿಪತ್ನಲ್ಲಿ ತನಗಾಗಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.
‘ನಾನು ಸನ್ಯಾಸಿ, ಮನುಕುಲದ ಸೇವೆ ಮಾಡುವುದು ನನ್ನ ಏಕೈಕ ಉದ್ದೇಶ. ನಾನು ಯಾವುದೇ ಸಚಿವ ಸ್ಥಾನ ಅಥವಾ ಹುದ್ದೆಯನ್ನು ಬಯಸುವುದಿಲ್ಲ. ನನಗೆ ಸನ್ಮಾನ ಮಾಡಿದಕ್ಕೆ ಧನ್ಯವಾದ. ಬಾಬಾ ಮತ್ತು ಫಕೀರನಾಗಿ ಈ ರಾಜ್ಯದ ಸೇವೆ ಮಾಡಲು ಬಯಸುತ್ತೇನೆ’ ಎಂದಿದ್ದಾರೆ.
ತನ್ನ ರಾಜ್ಯದಲ್ಲಿ ಯೋಗ ಮತ್ತು ಆರ್ಯುವೇದವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ರಾಮ್ದೇವ್ ಅವರನ್ನು ರಾಯಭಾರಿಯನ್ನಾಗಿ ಹರಿಯಾಣ ನೇಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.