×
Home About Us Advertise With s Contact Us

ಮಧ್ಯಪ್ರದೇಶ ರಾಜ್ಯಪಾಲರ ಪುತ್ರನ ಸಂಶಯಾಸ್ಪದ ಸಾವು

yadavನವದೆಹಲಿ: ಮಧ್ಯಪ್ರದೇಶದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಪುತ್ರ ಶೈಲೇಶ್ ಯಾದವ್ ಅವರು ಬುಧವಾರ ಲಕ್ನೋದಲ್ಲಿ ಮೃತಪಟ್ಟಿದ್ದಾರೆ. ಅವರ ವಿರುದ್ಧ ವೃತ್ತಿಪರ ಪರೀಕ್ಷಾ ಮಂಡಳಿ ಹಗರಣದ ಆರೋಪವಿತ್ತು.

ಮೆದುಳು ರಕ್ತಸ್ರಾವದಿಂದ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಮೃತದೇಹ ಅವರ ನಿವಾಸದ ಕೋಣೆಯಲ್ಲಿ ಪತ್ತೆಯಾಗಿದೆ. ಇವರ ಸಾವು ಹಲವು  ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇವರ ತಂದೆ ರಾಮ್ ನರೇಶ್ ಯಾದವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿದ್ದಾರೆ.

ವೃತ್ತಿಪರ ಪರೀಕ್ಷಾ ಮಂಡಳಿಯ ಸದಸ್ಯರಿಗೆ ಐವರು ವ್ಯಕ್ತಿಗಳ ಹೆಸರನ್ನು ಶಿಫಾರಸ್ಸು ಮಾಡಲು ಹೇಳಿದ ಆರೋಪ ಶೈಲೇಶ್ ಮೇಲಿತ್ತು.

 

Recent News

Back To Top
error: Content is protected !!