ಡೆಹ್ರಾಡೂನ್: ಸುರಿಯುತ್ತಿರುವ ಮಳೆ, ಹಿಮಪಾತದ ನಡುವೆಯೂ ಉತ್ತರಾಖಂಡದಲ್ಲಿ ಮಂಗಳವಾರ ವಾರ್ಷಿಕ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದೆ. ಅಕ್ಷಯ ತೃತೀಯದ ಶುಭದಿನವಾದ ಇಂದು ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ತೆರೆಯಲಾಗುತ್ತದೆ.
ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ. ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಸೇರಿದಂತೆ ಅನೇಕ ಅಧಿಕಾರಿಗಳು ಈಗಾಗಲೇ ಕೇದಾರನಾಥ, ಬದ್ರೀನಾಥಕ್ಕೆ ತೆರಳಿ ಅಲ್ಲಿ ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.
ಮಧ್ಯಾಹ್ನ 12.30ಕ್ಕೆ ಗಂಗೋತ್ರಿಯ ದ್ವಾರ ತೆರೆಯುತ್ತದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ, ಉತ್ತರಕಾಶಿಯಲ್ಲಿನ ಯಮುನೋತ್ರಿಯ ಬಾಗಿಲು 11.30ಕ್ಕೆ ತೆರೆದಿದೆ. ಎ.24ರಂದು ಬೆಳಿಗ್ಗೆ 8.30ಕ್ಕೆ ಕೇದಾರನಾಥ, ಬದ್ರೀನಾಥದ ಬಾಗಿಲು ತೆರೆಯಲಾಗುತ್ತದೆ.
10 ಸಾವಿರ ಫೀಟ್ ಇರುವ ದೇಗುಲಗಳ ಬಾಗಿಲನ್ನು ಮಳೆ ಮತ್ತು ಹಿಮಪಾತದ ಹಿನ್ನಲೆಯಲ್ಲಿ ನವೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಮುಚ್ಚಲಾಗುತ್ತದೆ.
2013ರಲ್ಲಿ ಮಹಾ ಪ್ರವಾಹ ಬಂದ ಹಿನ್ನಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. 2012ರಲ್ಲಿ 2.84ಇದ್ದ ಯಾತ್ರಾರ್ಥಿಗಳ ಸಂಖ್ಯೆ ಈ ವರ್ಷ 2.09 ಕೋಟಿಗೆ ಇಳಿದಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಯಾತ್ರಾರ್ಥಿಗಳನ್ನು ಸೆಳೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ, ಮೂಲಸೌಕರ್ಯವನ್ನು ವೃದ್ಧಿಸಿದೆ. ಪ್ರಚಾರ ಅಭಿಯಾನವನ್ನೂ ಆರಂಭಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ರಸ್ತೆಯನ್ನು ಉತ್ತಮಪಡಿಸಲಾಗಿದೆ.
ಭೂಕುಸಿತ ಸಂಭವಿಸಿದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಜನರ ರಕ್ಷಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.