ನಾಸಿಕ್: ‘ದಿ ಮ್ಯಾನ್ ವಿದ್ ಗೋಲ್ಡನ್ ಶರ್ಟ್’ ಎಂದೇ ತನ್ನ ಗೆಳೆಯರ ಬಳಗದಲ್ಲಿ ಕರೆಸಿಕೊಳ್ಳುವ ಉದ್ಯಮಿ, ರಾಜಕಾರಣಿ ಪಂಕಜ್ ಪ್ರಕಾಶ್ ಇದೀಗ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲೂ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಜಗತ್ತಿನ ಅತೀ ದುಬಾರಿ ಬೆಲೆಯ ಶರ್ಟ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಇವರಿಗೆ ಸಿಕ್ಕಿದೆ. ಇವರು ಹೊಂದಿರುವ ಬಂಗಾರದ ಶರ್ಟ್ನ ಬೆಲೆ ಬರೋಬ್ಬರಿ 98,35,099 ರೂಪಾಯಿ.
ತನ್ನ ಈ ದುಬಾರಿ ಸಾಧನೆಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿರುವ ಪಂಕಜ್, ’ನಾನು ಮಹಾರಾಷ್ಟ್ರದ ಸಣ್ಣ ಊರಿನಿಂದ ಬಂದವನು, ಈ ನನ್ನ ಸಾಧನೆ ನನ್ನ ಊರನ್ನು ಜಗತ್ತಿನಲ್ಲೇ ಪ್ರಸಿದ್ಧಗೊಳ್ಳುವಂತೆ ಮಾಡಿದೆ’ ಎಂದಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಶಿಕ್ಷಣ ತೊರೆದಿದ್ದ ಪಂಕಜ್, ಗಾರ್ಮೆಂಟ್ ಫ್ಯಾಬ್ರಿಕೇಶನ್ ಉದ್ಯಮದಲ್ಲಿ ಯಶಸ್ಸನ್ನು ಕಂಡವರು. ಎನ್ಸಿಪಿ ಪಕ್ಷದಿಂದ ಚುನಾವಣೆಗೆ ನಿಂತು ಮೇಯರ್ ಕೂಡ ಆಗಿದ್ದಾರೆ.
ಇವರ ಬಳಿ ಇರುವ ಶರ್ಟ್ನಲ್ಲಿ ಒಟ್ಟು 4.10 ಕೆಜಿ ಬಂಗಾರವಿದೆ. ಇದರ ಸದ್ಯದ ಬೆಲೆ 1.30 ಕೋಟಿ. ಇದಕ್ಕೆ ಮ್ಯಾಚಿಂಗ್ ಎನ್ನುವಂತೆ ಚಿನ್ನದ ವಾಚ್, ಹಲವಾರು ಗೋಲ್ಡ್ ಚೈನ್, ದೊಡ್ಡ ಉಂಗುರ, ಬಂಗಾರದ ಮೊಬೈಲ್, ಬಂಗರದ ಕನ್ನಡಕ ಇವರ ಬಳಿ ಇದೆ. ಇದೆಲ್ಲಾ ಸೇರಿ ಒಟ್ಟು 10ಕೆಜಿ ಬಂಗಾರವಾಗುತ್ತದೆ.
ಇದನ್ನೆಲ್ಲ ತೊಟ್ಟ ರಸ್ತೆಗಿಳಿಯುವಾಗ ಮಹಿಳೆಯರು ನನ್ನನ್ನು ದಿಟ್ಟಿಸಿ ನೋಡಿದರೆ, ಗಂಡಸರು ಗುರಾಯಿಸಿ ನೋಡುತ್ತಾರೆ ಎನ್ನುತ್ತಾರೆ ಪಂಕಜ್. ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಇವರನ್ನು ಸದಾ ಕಾವಲು ಕಾಯುತ್ತಿರುತ್ತಾರೆ.
ಶಾಲಾ ದಿನಗಳಿಂದಲೇ ಬಂಗಾರದ ಹುಚ್ಚು ನನ್ನನ್ನು ಆವರಿಸಿಕೊಂಡಿತ್ತು, ಬಳಿಕ ಅದೊಂದು ಹುಚ್ಚಾಗಿಯೇ ಪರಿಣಮಿಸಿತು ಎಂದು ಮುಕ್ತ ಮನಸ್ಸಿನಿಂದ ಅವರು ಹೇಳಿಕೊಳ್ಳುತ್ತಾರೆ. ಮದುವೆಯ ದಿನ ಹೆಂಡತಿಗಿಂತಲೂ ನಾನು ಹೆಚ್ಚಿನ ಆಭರಣಗಳನ್ನು ತೊಟ್ಟಿದ್ದೆ. ಇದನ್ನು ನೋಡಿದ ಅತಿಥಿಗಳು ಆಶ್ಚರ್ಯ ಚಕಿತಗೊಂಡರು ಎಂದು ಹೇಳಿ ನಗುತ್ತಾರೆ ಪಂಕಜ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.