ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗೆಗಿನ ದಾಖಲೆಗಳ ಬಗ್ಗೆ ಚರ್ಚಿಸುವ ಸಲುವಾಗಿ ದೆಹಲಿಗೆ ಬರುವಂತೆ ಅವರ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನ ನೀಡಿದ್ದಾರೆ.
ಮೇ 17ರಂದು ದೆಹಲಿಗೆ ಬಂದು ತನ್ನನ್ನು ಕಾಣುವಂತೆ ಬೋಸ್ ಅವರ 10 ಕುಟುಂಬ ಸದಸ್ಯರಿಗೆ ಮೋದಿ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೇತಾಜೀ ಕುಟುಂಬ ಸದಸ್ಯರ ಮೇಲೆ ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರು 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಿದ್ದರು ಎಂಬ ಮಾಹಿತಿ ಇತ್ತೀಚಿಗಷ್ಟೇ ಬಹಿರಂಗಗೊಂಡಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ನೇತಾಜೀ ಕುಟುಂಬ ಸದಸ್ಯರು ಒತ್ತಾಯಿಸಿದ್ದರು.
ಅಲ್ಲದೇ ನೇತಾಜೀ ಸಾವಿನ ಬಗೆಗೆ ಇರುವ ರಹಸ್ಯ ಕಡತಗಳನ್ನು ಬಹಿರಂಗಪಡಿಸುವಂತೆಯೂ ಕೇಂದ್ರಕ್ಕೆ ಮನವಿ ಮಾಡಿದ್ದರು. ಇತ್ತೀಚಿಗೆ ಜರ್ಮನಿಗೆ ತೆರಳಿದ್ದ ಮೋದಿ ಅಲ್ಲಿ ನೇತಾಜೀ ಅವರ ಸೋದರ ಮೊಮ್ಮಗ ಸೂರ್ಯ ಬೋಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಇದೀಗ ತನ್ನನ್ನು ಭೇಟಿಯಾಗುವಂತೆ ಬೋಸ್ ಕುಟುಂಬಸ್ಥರಿಗೆ ಮೋದಿ ಪತ್ರ ಬರೆದಿರುವುದು ಹಲವಾರು ಕುತೂಹಲಗಳನ್ನು ಕೆರಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.