ಬೆಂಗಳೂರು : ರಾಷ್ಟ್ರೋತ್ಥಾನ ಪರಿಷತ್ ಆರ್ಥಿಕವಾಗಿ ಹಿಂದುಳಿದ (ಕುಟುಂಬದ ವಾರ್ಷಿಕ ಆದಾಯ ರೂ. 1,50,000 ಮೀರಿರದ) ಪ್ರತಿಭಾವಂತರ ಆಸಕ್ತ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರುವ ಮಹೋದ್ದೇಶದಿಂದ ಸಮಗ್ರ ಕನ್ನಡನಾಡಿನ ಶೈಕ್ಷಣಿಕ ರಂಗಕ್ಕೆ ಹೆಮ್ಮೆಯ ಕೊಡುಗೆಯಾಗಿ 2012-13 ರಲ್ಲಿ ‘ತಪಸ್’ ಪ್ರಕಲ್ಪವನ್ನು ಪ್ರಾರಂಭಿಸಲಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ IIT- JEE Mains ಪರೀಕ್ಷೆಯನ್ನು 33 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಅದರಲ್ಲಿ 27 ವಿದ್ಯಾರ್ಥಿಗಳು Advance ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಬಹುಶಃ ಕರ್ನಾಟಕದಲ್ಲೇ ಒಂದು ಕಾಲೇಜಿನಲ್ಲಿ ಇಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು IIT-JEE Advance ಗೆ ಅರ್ಹತೆ ಪಡೆದಿರುವುದು ಇದೇ ಮೊದಲು.
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ 10 ನೇತರಗತಿ ಓದುತ್ತಿರುವ, ರಾಜ್ಯದ ಪ್ರತಿಭಾವಂತ ಗಂಡುಮಕ್ಕಳನ್ನು ವಿವಿಧ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ ಅವರಿಗೆ ಉಚಿತ ಪಿ.ಯು.ಸಿ. ಶಿಕ್ಷಣದ ಜೊತೆಗೆ ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೊಳಿಸುವುದೇ ‘ತಪಸ್’ ಯೋಜನೆಯ ಉದ್ದೇಶ. ಈ ಯೋಜನೆಯಲ್ಲಿ ವಸತಿ, ಭೋಜನ, ಕಾಲೇಜು ಶುಲ್ಕ, ಅಧ್ಯಯನ ಸಾಮಗ್ರಿ, ತರಬೇತಿ ಸೇರಿದಂತೆ 2 ವರ್ಷಗಳ ಶಿಕ್ಷಣ ಸಂಪೂರ್ಣ ಉಚಿತವಾಗಿದೆ. ಇದಕ್ಕಾಗಿ ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪರಿಸರದಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ವಸತಿ ನಿಲಯಗಳಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಪಿ.ಯು.ಸಿ. ಕಾಲೇಜನ್ನು ಪರಿಷತ್ ಪ್ರಾರಂಭಿಸಲಾಗಿದೆ.
ಐಐಟಿ-ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವ ಹಿನ್ನೆಲೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳ ಶ್ರೇಷ್ಟ ಮಟ್ಟದ ಸಾರಾಂಶವುಳ್ಳ ಪ್ರಶ್ನೋತ್ತರ ಸಹಿತ ಅಭ್ಯಾಸಪಾಠ್ಯಗಳನ್ನು ಸಿದ್ಧಪಡಿಸಿ, ಅವುಗಳನ್ನು ಪರಿಣಾಮಕಾರಿಯಾಗುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ‘ಬೇಸ್’ ಸಂಸ್ಥೆ ಮಾಡುತ್ತಿದೆ.
ಆರ್ಥಿಕವಾಗಿ ಹಿಂದುಳಿದ (ಕುಟುಂಬದ ವಾರ್ಷಿಕ ಆದಾಯ ರೂ. 1,50,000 ಮೀರಿರದ) ಪ್ರತಿಭಾವಂತರ ಆಸಕ್ತ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರುವ ಮಹೋದ್ದೇಶ. ಬಾಲಕ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಉಚಿತ ಪಿ.ಯು.ಸಿ. ಶಿಕ್ಷಣ ಮತ್ತು ಐಐಟಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ. ಉಚಿತ ವಸತಿ, ಬೋಜನ ವ್ಯವಸ್ಥೆ. ೯ನೇ ತರಗತಿಯಲ್ಲಿ ಶೇ. 80% ಅಂಕ ಪಡೆದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ನಡೆಸಿ ಆಯ್ಕೆ. ಆಯ್ಕೆಗೊಂಡ ವಿದ್ಯಾರ್ಥಿಗಳ ಮನೆ-ಮನೆಗೆ ಭೇಟಿಕೊಟ್ಟು ಪ್ರತಿಯೊಬ್ಬ ವಿದ್ಯಾರ್ಥಿಗಳ ವಾಸ್ತವಗಳ ಸ್ಥಿತಿಗತಿಗಳ ಸಮೀಕ್ಷೆ.
ಹೆಚ್ಚಿನ ಮಾಹಿತಿಗಾಗಿ : ರುಕ್ಮಿಣಿ ಎಸ್ , ಸಂಯೋಜಕರು – ತಪಸ್ ಪ್ರಕಲ್ಪ – 9481201144
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.