ಈ ಬಾರಿಯ ಬೇಸಿಗೆಯಿಂದ ಕಂಗಾಲಾಗಿರುವ ಜನರು ತಮ್ಮ ದಣಿವು ನಿವಾರಸಲು ತಂಪು ಪಾನೀಯಗಳನ್ನು ಸೇವಿಸಿ ದಾಹವನ್ನು ಕಡಿಮೆಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಕರುಣಾಜನ ಸ್ಥಿತಿಯಲ್ಲಿ ದೆಹಲಿಯ ಜನಕಪುರಿಯ ಚರ್ಚ್ವೊಂದು ನಿರ್ಗತಿಕರ ಸಹಾಯಕ್ಕೆ ಪ್ರಯತ್ನಿಸುತ್ತಿದೆ.
ಇಲ್ಲಿಯ ಮಾರ್ ಗ್ರೆಗೋರಿಯಸ್ ಆರ್ಥೋಡಾಕ್ಸ್ ಚರ್ಚ್ ಯಾತನಾಮಯ ಬೇಸಿಗೆಯಲ್ಲಿ ನಿರ್ಗತಿಕರಿಗೆ, ಬಡವರಿಗಾಗಿ ಸಾರ್ವಜನಿಕ ಫ್ರಿಡ್ಜ್ ಒಂದನ್ನು ಇರಿಸಿದೆ. ಈ ಚರ್ಚ್ನ ಪ್ರವರ್ತಕರೊಬ್ಬರು ಫ್ರಿಡ್ಜ್ನ್ನು ದಾನ ನೀಡಿದ್ದು, ಫ್ರಿಡ್ಜ್ನಲ್ಲಿ ತಂಪು ಪಾನೀಯ, ಹಣ್ಣುಗಳು, ಆಹಾರ ಪದಾರ್ಥಗಳನ್ನು ತುಂಬಿಡಲಾಗಿದೆ. ಬಡವರು ಯಾವುದೇ ಸಂದರ್ಭದಲ್ಲಿ ಚರ್ಚ್ನ ಭದ್ರತಾ ಸಿಬ್ಬಂದಿ ಮೂಲಕ ಆಹಾರ ಪದಾರ್ಥಗಳನ್ನು, ಪಾನೀಯವನ್ನು ಪಡೆದು ಸೇವಿಸಬಹುದಾಗಿದೆ.
ಕೊಚಿ ರೆಸ್ಟೋರೆಂಟ್ ಪ್ರಥಮವಾಗಿ ಇಂತಹ ಒಂದು ಯೋಜನೆಯನ್ನು ಆರಂಭಿಸಿ ರೆಸ್ಟೋರೆಂಟ್ ಮುಂಭಾಗದಲ್ಲಿ ಸಾರ್ವಜನಿಕ ಫ್ರಿಡ್ಜ್ ಇರಿಸಿತ್ತು. ಇದರಿಂದ ಪ್ರೇರಣೆ ಪಡೆದ ಗ್ರೆಗೋರಿಯಸ್ ಚರ್ಚ್ ಘಟಕ ’ಶೇರ್ ಎನ್ ಕೇರ್’ ಎಂಬ ಈ ಯೋಜನೆಯನ್ನು ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.