ನವದೆಹಲಿ: ಬೈಕ್-ಟ್ಯಾಕ್ಸಿ ಮತ್ತು ರೆಂಟ್-ಎ-ಬೈಕ್ (ಬಾಡಿಗೆ ಬೈಕ್) ಯೋಜನೆಗಳ ನಿಯಮ ಉಲ್ಲಂಘನೆ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ದೆಹಲಿಯ ಎಎಪಿ ಸರ್ಕಾರ ಈ ಯೋಜನೆಗಳಿಗೆ ತಡೆಯಾಜ್ಞೆ ನೀಡಿದೆ.
ಈ ಯೋಜನೆ ಅಡಿ ವಾಣಿಜ್ಯ ವಾಹನಗಳನ್ನು ಮಾತ್ರ ಬಳಸಬಹುದಾಗಿದ್ದು, ಗುರ್ಗಾಂವ್ನಲ್ಲಿ ಬೈಕ್-ಟ್ಯಾಕ್ಸಿ, ರೆಂಟ್-ಎ-ಬೈಕ್ ಯೋಜನೆಗಳ ನಿರ್ವಾಹಕರು ಖಾಸಗಿ ವಾಹನಗಳನ್ನು ಓಡಿಸುತ್ತಿದ್ದಾರೆ. ನಿರ್ವಾಹಕರು ನಿಯಮ ಉಲ್ಲಂಘನೆ ಮಾಡುತ್ತಿದ್ದು, ಈ ಯೋಜನೆ ಪರಿಶೀಲನೆ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಈ ಯೋಜನೆಗಳ ಪರಿಶೀಲನೆ ನಡೆಸಲಿದ್ದು, ಬಳಿಕ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಪಿ ಸರ್ಕಾರ ಡಿ.15, 2015ರಲ್ಲಿ ರೆಂಟ್-ಎ-ಬೈಕ್ ಯೋಜನೆ ನಮೂದಿಸಿದ್ದು, ಪ್ರವಾಸಿಗರಿಗಾಗಿ ಈ ಯೋಜನೆ ಕೈಗೊಳ್ಳಲಾಗಿತ್ತು.
ಬೆಂಗಳೂರಿನಲ್ಲೂ ಕೂಡ ಆರ್.ಟಿ.ಒ ಇದರ ವಿರುದ್ಧ ಕ್ರಮ ಕೈಗೊಂಡಿದೆ.
ರೆಂಟ್-ಎ-ಬೈಕ್ ಯೋಜನೆ ಅಡಿ ಪ್ರವಾಸಿಗರು ಬಾಡಿಗೆ ಬೈಕ್ ಪಡೆಯಲು ಬೈಕ್ ಕೌಂಟರ್ಗಳಲ್ಲಿ ದಾಖಲೆಗಳನ್ನು ನೀಡಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.