ತಿರುವನಂತಪುರಂ: ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿರುವ ಈ ವೇಳೆಯಲ್ಲಿ ಕೇರಳದ ಗ್ರಾಮವೊಂದು ಶೌಚಾಲಯದಲ್ಲೂ ಹೊಸ ಮಾದರಿಯನ್ನು ಹುಟ್ಟು ಹಾಕಿ ಇತರರಿಗೆ ಮಾದರಿಯಾಗಿದೆ.
ತಿರುವನಂತಪುರಂನಲ್ಲಿನ ಪುಲ್ಲುವಿಲ ಗ್ರಾಮ ದೇಶದಲ್ಲೇ ಮೊದಲ ಇ-ಟಾಯ್ಲೆಟ್ನ್ನು ಸ್ಥಾಪನೆ ಮಾಡಿದೆ, ಇದರಲ್ಲಿ ಅಳವಡಿಸಲಾದ ತಂತ್ರಜ್ಞಾನ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುತ್ತದೆ, ಮಾತ್ರವಲ್ಲ ಸೌರಶಕ್ತಿಯ ಉತ್ಪಾದನೆ ಮಾಡುತ್ತದೆ. ಕುಡಿಯೋ ನೀರನ್ನೂ ಉತ್ಪಾದಿಸುತ್ತದೆ.
ಇರಂ ಸೈನ್ಟಿಫಿಕ್ ಸೊಲ್ಯುಷನ್ ಎಂಬ ಸ್ಥಳಿಯ ಸಂಸ್ಥೆ ಬಿಲ್ ಆಂಡ್ ಮಲಿಂಡ ಗೇಟ್ಸ್ ಫೌಂಡೇಶನ್ನ ಅನುದಾನವನ್ನು ಬಳಕೆ ಮಾಡಿಕೊಂಡು ಇಲ್ಲಿ ಇ-ಶೌಚಾಲಯಗಳ ಸ್ಥಾಪನೆಯನ್ನು ಮಾಡಿದೆ. ಇದಕ್ಕೆ ದಕ್ಷಿಣ ಫ್ಲೊರಿಡಾದ ವಿಶ್ವವಿದ್ಯಾಲಯದ ಟೆಕ್ನಿಕಲ್ ಸಹಾಯ ಕೂಡ ದೊರೆತಿದೆ.
ಎಲೆಕ್ಟ್ರಾನಿಕ್, ಮೆಕ್ಯಾನಿಕಲ್, ವೆಬ್ ಮೊಬೈಲ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಇದು ಪ್ರವೇಶ, ಬಳಕೆ, ಸ್ವಚ್ಛತೆ, ನಿರ್ಗಮನ, ರಿಮೋಟ್ ಕಂಟ್ರೋಲಿಂಗ್ ಮೇಲೆ ಕಂಟ್ರೋಲ್ ಇಡುತ್ತದೆ.
ಈ ಶೌಚಾಲಯದಿಂದ ಹೊರ ಬರುವ ನೀರನ್ನು ರಿಸೈಕಲ್ ಮಾಡಲಾಗುತ್ತದೆ, ಆ ನೀರು ಮತ್ತೆ ಶೌಚಾಲಯಕ್ಕೆ ಹೋಗಿ ಫ್ಲಶ್ಗಳಿಗೆ ಬಳಸಲಾಗುತ್ತದೆ. ಘನ ತ್ಯಾಜ್ಯವನ್ನು ನೈಟ್ರೋಜನ್, ಪಾಸ್ಪರಸ್, ಪೊಟಾಶಿಯಂ ಆಗಿ ಪರಿವರ್ತನೆ ಮಾಡಲಾಗುತ್ತದೆ. ಉತ್ಪತ್ತಿಯಾಗುವ ಅನಿಲವನ್ನು ಮಿಥೆನ್ ಆಗಿಸಿ ಉರಿಸಲು ಬಳಸಬಹುದಾಗಿದೆ.
ಇದೊಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ನಾಣ್ಯವನ್ನು ಹಾಕಿದಾಗ ಮಾತ್ರ ಶೌಚಾಲಯದ ಬಾಗಿಲು ತೆರೆಯುತ್ತದೆ ಮತ್ತು ಕರೆಂಟ್ ಸ್ವಿಚ್ ಆನ್ ಆಗುತ್ತದೆ. ಏನು ಮಾಡಬೇಕು ಎಂಬ ಬಗ್ಗೆ ವ್ಯಕ್ತಿಗೆ ಆಡಿಯೋ ಮೂಲಕ ಡೈರೆಕ್ಷನ್ ನೀಡುತ್ತದೆ. 3 ನಿಮಿಷ ಬಳಕೆ ಮಾಡಿದರೆ 1 ಲೀಟರ್ ನೀರು ಫ್ಲಶ್ ಆಗುತ್ತದೆ. 3 ನಿಮಿಷಕ್ಕಿಂತ ಜಾಸ್ತಿ ಬಳಕೆ ಮಾಡಿದರೆ 4.5 ಲೀಟರ್ ಫ್ಲಶ್ ಆಗುತ್ತದೆ. 10 ಮಂದಿ ಬಳಸಿದ ನಂತರ ಇಡೀ ಶೌಚಾಲಯವನ್ನು ಶುಚಿಗೊಳಿಸಲಾಗುತ್ತದೆ.
ಒಟ್ಟಿನಲ್ಲಿ ಇ-ಶೌಚಾಲಯ ನಿಜಕ್ಕೂ ಒಂದು ಅದ್ಭುತ ಯೋಜನೆಯಾಗಿದ್ದು, ಸ್ವಚ್ಛ ಭಾರತದ ಕನಸಿಗೆ ಒಂದು ಅತ್ಯುತ್ತಮ ಮಾದರಿಯನ್ನು ಹಾಕಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.