ವಾಷಿಂಗ್ಟನ್: ಕುರುಡರ ಲೋಕದಲ್ಲಿ ಒಂಟಿ ಕಣ್ಣಿನ ರಾಜನಿದ್ದಂತೆ ಎಂದು ಭಾರತದ ಆರ್ಥಿಕತೆಯನ್ನು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ವಿಶ್ಲೇಷಿಸಿದ್ದಾರೆ.
ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಭಾರತೀಯ ಆರ್ಥಿಕತೆಯನ್ನು ಐಎಂಎಫ್ ಮುಖ್ಯಸ್ಥೆ ಸೇರಿದಂತೆ ಹೆಚ್ಚಿನವರು ಅತ್ಯುತ್ತಮವಾದುದು ಎಂದು ಬಣ್ಣಿಸುತ್ತಾರೆ. ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಬೀರುವ ಹೊರಗಿನ ಆಘಾತಕಾರಿ ಪ್ರಭಾವಗಳನ್ನು ಕಡಿಮೆ ಮಾಡಲು ರಾಜನ್ ನೇತೃತ್ವದಲ್ಲಿ ಆರ್ಬಿಐ ಅಗತ್ಯಕ್ರಮಗಳನ್ನು ಕೈಗೊಂಡಿದೆ.
’ತೃಪ್ತಿ ಎನಿಸುವ ಪ್ರದೇಶವನ್ನು ತಲುಪಲು ನಾವಿನ್ನೂ ಸಾಕಷ್ಟು ಕ್ರಮಿಸಬೇಕಾಗಿದೆ, ಹೀಗಾಗಿ ಭಾರತದ ಆರ್ಥಿಕತೆ ಕುರುಡರ ಲೋಕದ ಒಂಟಿನ ಕಣ್ಣಿನ ರಾಜ ಎಂದು ನಾನು ಹೇಳಬಯಸುತ್ತೇನೆ. ಆ ಮಾರ್ಗದತ್ತ ನಾವು ಸಣ್ಣದಾಗಿ ಹೆಜ್ಜೆ ಹಾಕುತ್ತಿದ್ದೇವೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.