ನವದೆಹಲಿ: ಗುಟ್ಕಾ, ಪಾನ್ ಮಸಾಲ, ಖೈನಿ, ಝರ್ದ ಸೇರಿದಂತೆ ಎಲ್ಲಾ ಬಗೆಯ ಜಗಿಯುವ ತಂಬಾಕು ಪದಾರ್ಥಗಳ ಸೇವನೆ, ಮಾರಾಟ, ಸಂಗ್ರಹವನ್ನು ದೆಹಲಿ ಸರ್ಕಾರ ಒಂದು ವರ್ಷಗಳ ಕಾಲ ನಿಷೇಧಕ್ಕೊಳಪಡಿಸಿದೆ.
ಈ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಗುರುವಾರ ನೋಟಿಫಿಕೇಶನ್ ಹೊರಡಿಸಿದೆ, ಪ್ಯಾಕ್ ಮಾಡದ ಜಗಿಯುವ ತಂಬಾಕು ಪದಾರ್ಥಗಳನ್ನು ಕೂಡ ನಿಷೇಧಕ್ಕೊಳಪಡಿಸಲಾಗಿದೆ.
ಇವುಗಳ ತಯಾರಿಕೆ, ಮಾರಾಟ, ಸೇವನೆ ಮತ್ತು ಸಂಗ್ರಹ ರಾಷ್ಟ್ರ ರಾಜಧಾನಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ. ಸುಪ್ರಿಂಕೋರ್ಟ್ನ ಸ್ಪಷ್ಟ ಆದೇಶದ ಹಿನ್ನಲೆಯಲ್ಲಿ ಈ ನಿಷೇಧ ಜಾರಿಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.