ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಶುಕ್ರವಾರದಿಂದ ಆರಂಭಗೊಂಡಿದೆ. 2 ಸಾವಿರ ಟ್ರಾಫಿಕ್ ಸಿಬ್ಬಂದಿ, 580 ಎನ್ಫೋರ್ಸ್ಮೆಂಟ್ ಅಧಿಕಾರಿಗಳು, 5 ಸಾವಿರ ಸಿವಿಲ್ ಡಿಫೆನ್ಸ್ ಸ್ವಯಂಸೇವಕರು ನಿಯಮ ಯಶಸ್ಸಿಗಾಗಿ ನಿಯೋಜಿತರಾಗಿದ್ದಾರೆ.
ಎರಡನೇ ಹಂತದ ನಿಯಮ ಯಶಸ್ವಿಗೊಂಡರೆ ಸಮಬೆಸ ನಿಯಮವನ್ನು ನಿರಂತರವಾಗಿ ಮಾಡುತ್ತೇವೆ ಎಂದು ಈಗಾಗಲೇ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.
ಈ ಬಾರಿ ಮಹಿಳಾ ಡ್ರೈವರ್ ಮತ್ತು ಶಾಲಾ ಸಮವಸ್ತ್ರ ತೊಟ್ಟ ಮಕ್ಕಳಿದ್ದ ಕಾರುಗಳಿಗೆ ನಿಯಮದಿಂದ ವಿನಾಯಿತಿಯನ್ನು ನೀಡಲಾಗಿದೆ.
ವಾಯು ಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ ಎಎಪಿ ಸರ್ಕಾರ ಈ ನಿಯಮವನ್ನು ಜಾರಿಗೊಳಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.