ಹೆಚ್ಚುತ್ತಿರುವ ಮಾಲಿನ್ಯದ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದು, ಶ್ರೀನಗರದ ಮೋತಿ ಮೊಹಲ್ಲಾದ ನಿವಾಸಿಗಳು ದಾಲ್ ಸರೋವರ ಸ್ವಚ್ಛತೆಗೊಳಿಸಲು ಗೂಂಜ್ ಜೊತೆ ಕೈಜೋಡಿಸಿದ್ದಾರೆ.
ದಾಲ್ ಸರೋವರ ಕಾಶ್ಮೀರದ ಹೃದಯವಾಗಿದ್ದು, ಇದು ವಿಶ್ವದಾದ್ಯಂತ ಇದರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಸರೋವರ ಕಳೆ ಗಿಡ (ಅಝೊಲ್ಲಾ, ಪಾಚಿ, ಕಸಕಡ್ಡಿ)ಗಳಿಂದ ಕೂಡಿದ್ದು ಸರೋವರದ ನಾಶಕ್ಕೆ ಕಾರಣವಾಗಿದೆ. ತಮ್ಮ ನಿತ್ಯದ ಕಾರ್ಯಗಳಿಗೆ ಈ ಸರೋವರದ ನೀರನ್ನೇ ಅವಲಂಬಿಸಿದವರಿಗೆ ಈ ಕಳೆ ಗಿಡಗಳು ಸಮಸ್ಯೆ ಉಂಟುಮಾಡಿವೆ.
2014ರ ಸೆಪ್ಟೆಂಬರ್ನಲ್ಲಿ ಸಂಭವಿಸಿದ ಪ್ರವಾಹದ ಬಳಿಕ ದಾಲ್ ಸರೋವರದ ಸುತ್ತಲಿನ ಮೋತಿ ಮೊಹಲ್ಲಾ ಗ್ರಾಮದ ಜನರಿಗೆ ಪರಿಹಾರ ಸಾಮಗ್ರಿಗಳು, ವಸ್ತುಗಳನ್ನು ತಲುಪಿಸುವಲ್ಲಿ ಗೂಂಜ್ ಸಹಕರಿಸಿದೆ.
ಗೂಂಜ್ನ ’ಕ್ಲಾಥ್ ಫಾರ್ ವರ್ಕ್’ ಯೋಜನೆ ಅಡಿಯಲ್ಲಿ ಈ ಗ್ರಾಮದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನಿವಾರಿಸಲು ಜೊತೆಗೂಡುತ್ತಾರೆ. ನಾಗರಿಕರು ಸಮಸ್ಯೆಗಳನ್ನು ಪರಿಹರಿಸಲು ಗ್ರಾಮದ ಸಂಪನ್ಮೂಲಗಳನ್ನು ಬಳಸುತ್ತಾರೆ. ಈ ಸಮಸ್ಯೆಗಳ ನಿವಾರಣೆಗೆ ಕೈಜೋಡಿಸಿದ ಗ್ರಾಮಸ್ಥರಿಗೆ ಉಡುಪು, ಗೃಹಬಳಕೆ ವಸ್ತುಗಳನ್ನು ಗೂಂಜ್ ಒದಗಿಸುತ್ತದೆ.
ಮೊದಲ ಹಂತದಲ್ಲಿ ಗ್ರಾಮದ 145 ಜನರು ಎರಡು ದಿನಗಳ ಕಾಲ 70 ದೋಣಿಗಳ ಸಹಾಯದಿಂದ ಕಳೆಗಿಡ, ಪಾಚಿ ತೆಗೆಯುವ ಮೂಲಕ ಸರೋವರದ ಶುದ್ಧೀಕರಣಕ್ಕೆ ಕೈಜೋಡಿಸಿದ್ದಾರೆ.
ಎರಡನೇ ಹಂತದಲ್ಲಿ ಸುಮಾರು 167 ಮಂದಿ ಎರಡು ದಿನಗಳ ಕಾಲ 78 ದೋಣಿಗಳಲ್ಲಿ ಸರೋವರದ ಶುದ್ಧೀಕರಣಕ್ಕೆ ಕೈಜೋಡಿಸಿದ್ದಾರೆ. ಈ ಎರಡೂ ಹಂತಗಳಲ್ಲಿ ಸುಮಾರು 500 ದೋಣಿಗಳಲ್ಲಿ ತುಂಬುವಷ್ಟು ಕಳೆಗಿಡ, ಕಸ ಕಡ್ಡಿಗಳನ್ನು ಬೇರು ಸಮೇತವಾಗಿ ಕೈಯಾರೆ ತೆಗೆದು ಶುದ್ಧೀಕರಿಸಲಾಗಿತ್ತು.
ಇದರಿಂದಾಗಿ ಗೂಂಜ್ ಯೋಜನೆ ಅಡಿ ಜನರು ಉಡುಪು, ಮತ್ತಿತರ ಗೃಹಬಳಕೆ ವಸ್ತುಗಳನ್ನು ಪಡೆದಿದ್ದಾರೆ. ಈ ಉಡುಪು, ಬಟ್ಟೆ, ಬರೆಗಳು ಈ ಜನರು ಇಲ್ಲಿನ ಕಾಶ್ಮೀರ ಕಣಿವೆಯಲ್ಲಿ ಚಳಿಯ ವಿರುದ್ಧ ಹೋರಾಡಲು ಸಹಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.