ಕೇರಳ: ಕೊಲ್ಲಂನ ಪುಟ್ಟಿಂಗಲ್ ದೇವಿ ದೇಗುಲದಲ್ಲಿ ನಡೆದ ಪಟಾಕಿ ಅನಾಹುತದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ರಾತ್ರಿ ಹೊತ್ತು ಪಟಾಕಿಗಳನ್ನು ನಿಷೇಧಿಸುವುದಕ್ಕೂ ಅದು ಸಲಹೆ ನೀಡಿದೆ.
ಈ ದುರಂತಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮವನ್ನು ಕೈಗೊಳ್ಳಬೇಕು, ಇದರ ತನಿಖೆಯನ್ನು ಸಿಬಿಐನಿಂದ ಮಾಡಿಸಬೇಕು ಎಂದು ಮಂಗಳವಾರ ಕೇರಳ ಸರ್ಕಾರಕ್ಕೆ ಅದು ಆದೇಶಿಸಿದೆ.
ಸಿಎಂ ಉಮ್ಮನ್ ಚಾಂಡಿ ಅವರು ಈ ಬಗ್ಗೆ ಚರ್ಚಿಸುವುದಕೆ ಈಗಾಗಲೇ ಎ.೧೪ರಂದು ಸರ್ವ ಪಕ್ಷ ಸಭೆಯನ್ನು ಕರೆದಿದ್ದಾರೆ.
ಎ.೧೦ರಂದು ನಡೆದ ದುರ್ಘಟನೆಯಲ್ಲಿ 111 ಮಂದಿ ಸಾವನ್ನಪ್ಪಿ, ೩೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.