ಶಿರೂರು: ದೇವರು ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ. ಆತನಿಗೆ ದೇವಸ್ಥಾನ ನಿರ್ಮಿಸುತ್ತಾ ಹೋಗುವುದಕ್ಕಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಡಿ. ಬಿ. ಜಯಚಂದ್ರ ಹೇಳಿದರು.
ಶಿರೂರು ಕಿಳಿಹಿತ್ಲುವಿನಲ್ಲಿ ಕಡಲು ಕೊರೆತ ತಡೆಗಟ್ಟುವ ನೆಲೆಯಲ್ಲಿ ಸುಮಾರು 5 ಕೋಟಿ ವೆಚ್ಚದ 400ಮಿ. ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದೂರದೃಷ್ಠಿತ್ವವುಳ್ಳ ಸಮಜ ನಿರ್ಮಾಣವಾಗಬೇಕಿದೆ. ಕರಾವಳಿ ಇತಿಹಾಸ ಹಾಗೂ ಈ ಭಾಗದ ಜನರ ಸೌಜನ್ಯತನ ದೇಶದ ಯಾವ ಪ್ರದೇಶದಲ್ಲಿಯೂ ಇಲ್ಲ. ಶಾಸಕ ಕೆ. ಗೋಪಾಲ ಪೂಜಾರಿಯವರ ಕೋರಿಕೆ ಮೇರೆಗೆ ಇಲ್ಲಿನ ರೈತರ ಹಿತದೃಷ್ಠಿಯಿಂದ ತುರ್ತಾಗಿ ಅಗತ್ಯವಿರುವ ಪಶು ಆಸ್ಪತ್ರೆ ನಿರ್ಮಾಣ ಹಾಗೂ ಪಶುವೈದ್ಯರ ನೇಮಕಾತಿ ತ್ವರಿತವಾಗಿ ಅನುಷ್ಠಾನ ಗೊಳಿಸಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಸಚಿವರೂ ಆದ ಜಯಚಂದ್ರ ಹೇಳಿದರು.
ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್, ಅರಣ್ಯ ಸಚಿವ ಬಿ. ರಮಾನಾಥ ರೈ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಬ್ಲಾಸಂ ಫೆರ್ನಾಂಡಿಸ್, ಮೀನುಗಾರಿಕಾ ಸಚಿವ, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಗ್ರಾಪಂ ಅದ್ಯಕ್ಷ ರಾಮ ಮೇಸ್ತ, ತಾಪಂ ಸದಸ್ಯರಾದ ಎಸ್.ರಾಜು ಪೂಜಾರಿ, ಸಾವಿತ್ರಿ ಅಳ್ವೇಗದ್ದೆ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.