ದೇಶದ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಅವಿರತ ಶ್ರಮವನ್ನು ಪಡುತ್ತಿದ್ದಾರೆ, ಕಡಿಮೆ ನಿದ್ರೆ ಮಾಡುತ್ತಾರೆ ಹೆಚ್ಚು ಕಾರ್ಯ ಮಾಡುತ್ತಾರೆ. ದೇಶದ ಜನರಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅದು ದೇಶದ ಮೂಲೆ ಮೂಲೆಗೂ ತಲುಪಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದರಲ್ಲಿಂದ ಹಿಡಿದು ವಿದೇಶಿ ಪ್ರವಾಸ ಮಾಡಿ ಅಂತಾರಾಷ್ಟ್ರೀಯ ಸಂಬಂಧಗಳನ್ನೂ ವೃದ್ಧಿಸಿಕೊಳ್ಳುತ್ತಿದ್ದಾರೆ.
ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಮೋದಿ, ಜನಸೇವೆ ಮಾಡಲು ತನಗೆ ದೊರೆತಿರುವ ಅಮೂಲ್ಯ ಕ್ಷಣಗಳು ಪೋಲಾಗದಂತೆ ಎಚ್ಚರಿಕೆಯನ್ನೂ ವಹಿಸುತ್ತಿದ್ದಾರೆ. ಅದಕ್ಕಾಗಿ ಒಂದು ದಿನವೂ ರಜೆ ಮಾಡದೆ, ವಿಶ್ರಾಂತಿಯನ್ನು ಪಡೆದುಕೊಳ್ಳದೆ, ರಾತ್ರಿ ಹೊತ್ತು ಕಡಿಮೆ ಸಮಯ ನಿದ್ರೆ ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಸಮಯವನ್ನು ದೇಶಕ್ಕೆ ನೀಡುತ್ತಿದ್ದಾರೆ.
ಪ್ರಧಾನಿಯಾದ ಬಳಿಕ ಬೇರೆ ಬೇರೆ ದೇಶಗಳಿಗೆ ಪ್ರವಾಸಕೈಗೊಂಡಿರುವ ಮೋದಿ ತಮ್ಮ ಪ್ರಯಾಣದ ವೇಳೆಯಲ್ಲೂ ಸಮಯವನ್ನು ಉಳಿತಾಯ ಮಾಡುತ್ತಿದ್ದಾರೆ. ವಿದೇಶಿ ಪ್ರವಾಸವನ್ನು ಹೆಚ್ಚಾಗಿ ರಾತ್ರಿ ಹೊತ್ತಲ್ಲೇ ಮಾಡುತ್ತಾರೆ. ಹೋಟೆಲ್ಗಳಲ್ಲಿ ರಾತ್ರಿ ಕಳೆಯುವ ಬದಲು ವಿಮಾನದಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಪ್ರಯಾಣದ ವೇಳೆಯೇ ವಿಮಾನದಲ್ಲಿ ಮಲಗುತ್ತಾರೆ. ಹೀಗೆ ಅವರ ಪ್ರಯಾಣ ಮತ್ತು ನಿದ್ರೆ ಒಟ್ಟಿಗೆ ಸಾಗುತ್ತದೆ. ಅಮೂಲ್ಯ ಸಮಯದ ಉಳಿತಾಯವಾಗುತ್ತದೆ.
ಇತ್ತೀಚಿಗೆ ಬೆಲ್ಜಿಯಂ, ಯುಎಸ್, ಸೌದಿ ಅರೇಬಿಯಾಗೆ ಪ್ರವಾಸಕೈಗೊಂಡಿದ್ದ ಮೋದಿ 3 ರಾತ್ರಿಗಳನ್ನು ಏರ್ಇಂಡಿಯಾದಲ್ಲೇ ಕಳೆದಿದ್ದಾರೆ. ಉಳಿದಂತೆ ರಿಯಾದ್ ಮತ್ತು ವಾಷಿಂಗ್ಟನ್ನಲ್ಲಿ ಎರಡು ರಾತ್ರಿಗಳನ್ನು ಮಾತ್ರ ಕಳೆದಿದ್ದಾರೆ. ಈ ಮೂರು ರಾಷ್ಟ್ರಗಳ ಪ್ರವಾಸವನ್ನು ಮುಗಿಸಲು ಅವರು ತೆಗೆದುಕೊಂಡಿದ್ದು 97 ಗಂಟೆಗಳನ್ನು. ಒಂದು ವೇಳೆ ಅವರು 3 ರಾತ್ರಿಗಳನ್ನು ಏರ್ಇಂಡಿಯಾದಲ್ಲಿ ಕಳೆಯದೇ ಹೋಗಿದ್ದರೆ ಅವರಿಗೆ 3 ರಾಷ್ಟ್ರ ತಿರುಗಲು ಆರು ದಿನಗಳು ಬೇಕಾಗುತ್ತಿದ್ದವು.
ನಿಜಕ್ಕೂ ಸಮಯ ಉಳಿತಾಯದ ಕಲೆಯನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಭಾರತೀಯರು ಕಲಿಯಬೇಕಾಗಿದೆ. ಸಮಯ ಮತ್ತು ಹಣವನ್ನು ದುಂದುವೆಚ್ಚ ಮಾಡುವ ಈ ದೇಶದ ರಾಜಕಾರಣಿಗಳೂ ಇವರನ್ನು ನೋಡಿ ಕಲಿಯಬೇಕಾದುದು ಸಾಕಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.