ಈ ದೇಶದ ಭವಿಷ್ಯವನ್ನು ಗಂಡಸರು ಅಥವಾ ಹೆಂಗಸರೇ ಏಕೆ ನಿರ್ಧರಿಸಬೇಕು? ತೃತೀಯ ಲಿಂಗಿಗಳಾಗಿ ದೇಶವನ್ನು ಮುನ್ನಡೆಸುವ ಹಕ್ಕು ನಮಗೂ ಇದೆ ಎನ್ನುತ್ತಾ ತೃತೀಯ ಲಿಂಗಿಯೊಬ್ಬರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧವೇ ಕಣಕ್ಕಿಳಿದಿದ್ದಾರೆ.
ಜಯಾ ಅವರು ಸ್ಪರ್ಧಿಸುತ್ತಿರುವ ಆರ್ಕೆ ನಗರ ಕ್ಷೇತ್ರದಲ್ಲಿ ಅವರ ವಿರುದ್ಧ ನಾಮ್ ತಮಿಳರ್ ಕೊಚ್ಚಿ ಪಕ್ಷದ ಟಿಕೆಟ್ ಪಡೆದು 33 ವರ್ಷದ ಸಿ.ದೇವಿ ಎಂಬ ತೃತೀಯ ಲಿಂಗಿ ಕಣಕ್ಕಿಳಿಯುತ್ತಿದ್ದಾರೆ.
ತೃತೀಯ ಲಿಂಗಿ ಎಂಬ ಕಾರಣಕ್ಕೆ ಹೈ ಪ್ರೊಫೈಲ್ ಕ್ಷೇತ್ರದ ಟಿಕೆಟ್ ಪಡೆದುಕೊಂಡಿದ್ದೇನೆ ಎಂದು ಹೆಮ್ಮೆಯಿಂದ ಹೇಳುವ ದೇವಿ, ನಾಮ್ ತಮಿಳರ್ ಕೊಚ್ಚಿ ಪಕ್ಷದಲ್ಲಿ ಆರಂಭದಿಂದಲೂ ಕಾರ್ಯ ಮಾಡುತ್ತಿದ್ದಾರೆ. ತಮಿಳರ ಏಳಿಗೆಯೇ ನನ್ನ ಗುರಿ ಎನ್ನುತ್ತಾರೆ ದೇವಿ.
ತನ್ನ ಚುನಾವಣಾ ಸ್ಪರ್ಧೆಯನ್ನು ವಾಸ್ತವವಾಗಿಯೇ ವಿಶ್ಲೇಷಿಸುವ ದೇವಿ, ನನ್ನ ಸ್ಪರ್ಧೆಯಿಂದ ರಾಜಕೀಯ ಪಕ್ಷಗಳು ನಮ್ಮ ಸಮುದಾಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬಹುದು, ಈ ಅವಕಾಶವನ್ನು ನಾನೇಕೆ ತಪ್ಪಿಸಿಕೊಳ್ಳಬೇಕು ಎನ್ನುತ್ತಾರೆ.
ದ್ರಾವಿಡ ಪಕ್ಷಗಳನ್ನು ಮತ್ತು ಕಾಂಗ್ರೆಸ್ನ್ನು ತಮಿಳುನಾಡಿನಿಂದ ನಿರ್ಮೂಲನೆ ಮಾಡುವ ಉದ್ದೇಶವೂ ಅವರಿಗಿದೆಯಂತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.