ನ್ಯೂಯಾರ್ಕ್: ಸಿಮ್ರತ್ಪಾಲ್ ಸಿಂಗ್ ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಅಮೆರಿಕಾ ಸೇನೆಗೋಸ್ಕರ ತಮ್ಮ ಬದುಕನ್ನು ಮುಡುಪಾಗಿಟ್ಟವರು. ಸಿಖ್ ಧಾರ್ಮಿಕ ನಂಬಿಕೆಯಲ್ಲಿ ಟರ್ಬನ್ ತೊಡುವುದು, ಗಡ್ಡ ಬಿಡುವುದು ಕಡ್ಡಾಯ. ಆದರೆ ಅಮೆರಿಕನ್ ಸೇನೆಯಲ್ಲಿ ಅದಕ್ಕೆ ಆಸ್ಪದವಿರಲಿಲ್ಲ.
ಆದರೀಗ ಯುಎಸ್ ಸೇನೆಯ ಕ್ಯಾಪ್ಟರ್ ಆಗಿರುವ ಸಿಮ್ರಾತ್ಪಾಲ್ ಅವರಿಗೆ ಅಮೆರಿಕ ಟರ್ಬನ್ ತೊಟ್ಟು, ಉದ್ದ ಗಡ್ಡ ಬಿಟ್ಟು ಸೇನೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಿದೆ.
ಮೊದಲಿನಿಂದಲೂ ಸಿಮ್ರಾತ್ಪಾಲ್ ಅವರಿಗೆ ಸೇನೆಗೆ ಸೇರುವ ಆಶಯವಿತ್ತು. ದುರ್ಬಲರ ಪರವಾಗಿ ನಿಲ್ಲುವುದು ಮತ್ತು ರಕ್ಷಣೆಯಿಲ್ಲದವರಿಗೆ ರಕ್ಷಾ ಕವಚವಾಗುವುದು ಸಿಖ್ ಧರ್ಮದ ಮೂಲ ಆಶಯ. ಇದೇ ಆಶಯ ಸೇನೆಯದ್ದು ಕೂಡ. ಹೀಗಾಗೀ ಅವರು ಯುಎಸ್ ಸೇನೆಯನ್ನು ಸೇರಿಕೊಂಡರು.
ಆದರೆ ಟರ್ಬನ್ ತೊಡುವ ಗಡ್ಡ ಬಿಡುವ ಅವಕಾಶ ಅಲ್ಲಿ ಇಲ್ಲದೇ ಇರುವುದು ಸಿಖ್ ಧರ್ಮದಲ್ಲಿ ಅಪಾರ ನಂಬಿಕೆ ಹೊಂದಿದ ಸಿಮ್ರಾತ್ ಅವರನ್ನು ತೀವ್ರವಾಗಿ ಕಾಡಿತ್ತು. ಇದಕ್ಕಾಗಿಯೇ ಅವರು ಕಾನೂನು ಹೋರಾಟ ಆರಂಭಿಸಿದರು. ನ್ಯಾಯಾಲಯದ ಮೆಟ್ಟಿಲೇರಿದರು. ಸೇನಾ ಅಧಿಕಾರಿಗಳಿಗೆ ಟರ್ಬನ್ನ ಮಹತ್ವವನ್ನು, ಇತಿಹಾಸವನ್ನು ಅರ್ಥೈಸಿದರು.
ಅದೆಲ್ಲದರ ಫಲವಾಗಿ ಇದೀಗ ಯುಎಸ್ ಸೇನೆ ಸಿಮ್ರಾತ್ಪಾಲ್ ಅವರಿಗೆ ಅಪ್ಪಟ ಸಿಖ್ನಂತೆ ಟರ್ಬನ್ ತೊಟ್ಟು, ಗಡ್ಡ ಬಿಡಲು ಅವಕಾಶ ನೀಡಿದೆ. ತನ್ನ ಧರ್ಮದ ಪದ್ಧತಿಯಲ್ಲಿ ನಡೆದು ತಾನು ಬೆಳೆದ ದೇಶದ ಸೇವೆಯನ್ನು ಅವರು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.