ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ ಬೆಳ್ತಂಗಡಿ ತಾಲೂಕು ಘಟಕದಿಂದ ಶುಕ್ರವಾರ ಎನ್ಪಿಎಸ್ ಯೋಜನೆಯನ್ನು ವಿರೋಧಿಸಿ ಕರಾಳ ದಿನಾಚರಣೆಯನ್ನು ಕಪ್ಪು ಪಟ್ಟಿ ಧರಿಸಿ ಸೇವಾ ಕೈಕಂರ್ಯವನ್ನು ಮಾಡಿದರು.
ಎನ್ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕು, ನಿಶ್ಚಿತ ಪಿಂಚಣಿ ಜಾರಿಗೆ ತರಬೇಕು, ಈಗಾಗಲೇ ಮರಣ ಹೊಂದಿದ ಎನ್ಪಿಎಸ್ ನೌಕರರ ಅವಲಂಭಿತರಿಗೆ ಹಿಂದಿನ ಪಿಂಚಣಿ ಯೋಜನೆಯ ಸವಲತ್ತುಗಳನ್ನು ಜಾರಿಗೊಳಿಸಬೇಕು, ಪಿಎಫ್ಆರ್ಡಿಎ ಕಾಯಿದೆಯನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂಬ ಹಲವಾರು ಬೇಡಿಕೆಯನ್ನು ಮುಂದಿರಿಸಿ ಕರಾಳ ದಿನವನ್ನು ಆಚರಿಸಲಾಯಿತು. ಅಲ್ಲದೆ ಈ ಯೋಜನೆಯನ್ನು ರದ್ದುಗೊಳಿಸುವಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಕಾರ್ಡ್ ಚಳುವಳಿಗೂ ಚಾಲನೆ ನೀಡಿದರು.
ಬೆಳ್ತಂಗಡಿ ತಾ| ಅಧ್ಯಕ್ಷ ಸುರೇಶ್ ಮಾಚಾರ್, ಕಾರ್ಯದರ್ಶಿ ಸೀತಾರಾಮ, ಉಪಾಧ್ಯಕ್ಷ ಶೇಖರ್ ಶಂಕು, ಕೋಶಾಧಿಕಾರಿ ಜಯ ನಾಯ್ಕ, ಜಿಲ್ಲಾ ಪ್ರತಿನಿಧಿ ಚೇತನ್ ಕುಮಾರ್, ಬೆಳ್ತಂಗಡಿ ಹೋಬಳಿ ಸಂಚಾಲಕ ಕಿರಣ್ ಮೊದಲಾದವರು ನೇತೃತ್ವ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.