ಜಮ್ಮು: ಉಗ್ರರ ವಿರುದ್ಧ ಹೋರಾಟ ನಡೆಸುವುದಕ್ಕಾಗಿ ಭಾರತೀಯ ಸೇನೆಯಲ್ಲಿ ನಮಗೆ ಸ್ಪೆಷಲ್ ರೆಜಿಮೆಂಟನ್ನು ನೀಡಬೇಕು ಎಂದು ಗುಜ್ಜರ್-ಬಕೆರ್ವಾಲ್ ನಾಯಕರು ಬೇಡಿಕೆಯಿಟ್ಟಿದ್ದಾರೆ.
ಬಹುತೇಕ ಗುಜ್ಜರ್ ಮತ್ತು ಬಕೆರ್ವಾಲ್ ಸಮುದಾಯ ಜಮ್ಮು ಕಾಶ್ಮೀರದ ಅರಣ್ಯ ಪ್ರದೇಶ ಮತ್ತು ಎಲ್ಓಸಿ ಸಮೀಪ ವಾಸ ಮಾಡುತ್ತಿದೆ. ಹೀಗಾಗಿ ಈ ಸಮುದಾಯಕ್ಕೆ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಲು ವಿಶೇಷ ರೆಜಿಮೆಂಟನ್ನು ನೀಡಬೇಕು ಎಂದು ಗುಜ್ಜರ್ ನಾಯಕ ಶಂಶೀರ್ ಹಕ್ಲ ಪೂಂಚಿ ಹೇಳಿದ್ದಾರೆ.
ಈ ವಲಸಿಗ ಸಮುದಾಯ ಜಮ್ಮು ಕಾಶ್ಮೀರದಲ್ಲಿ ಸದಾ ಉಗ್ರರ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದೆ, ಅಲ್ಲದೇ 1947ರಲ್ಲಿ ಪಾಕಿಸ್ಥಾನದ ಬುಡಕಟ್ಟು ಆಕ್ರಮಣವನ್ನು ತಡೆಯುವಲ್ಲಿಯೂ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.
’1947ರ ಪಾಕಿಸ್ಥಾನ ಬುಡಕಟ್ಟು ಆಕ್ರಮಣವಿರಲಿ. ಭಾರತ-ಪಾಕ್ ಯುದ್ಧವಿರಲಿ ಗುಜ್ಜರ್ ಮತ್ತು ಬಕೆರ್ವಾಲ್ ಜನರು ಭಾರತೀಯ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ಕಾರ್ಗಿಲ್ನ ತುದಿಯಲ್ಲಿ ಪಾಕಿಸ್ಥಾನ ತನ್ನ ಸೇನೆಯನ್ನು ಜಮಾವಣೆ ಮಾಡಿದ ವಿಷಯವನ್ನೂ ತಿಳಿಸಿದ್ದು ನಮ್ಮ ಸಮುದಾಯದವರು’ ಎಂಬುದನ್ನು ನೆನಪಿಸಿದ್ದಾರೆ.
ಈ ದೇಶಕ್ಕಾಗಿ ಮಹತ್ವಪೂರ್ಣ ತ್ಯಾಗ ಮಾಡಿದ ಗುಜ್ಜರ್ ಸಮುದಾಯದ ನಾಯಕರ ಪೋಸ್ಟಲ್ ಸ್ಟ್ಯಾಂಪ್ನ್ನೂ ಹೊರ ತರಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.