ಹೊಟೇಲ್ಗೆ ತೆರಳಿ ಅದು ಇದು ಎಂದು ದುಬಾರಿ ಆಹಾರಗಳನ್ನು ಆರ್ಡರ್ ಮಾಡುವ ಜನರು ಅದನ್ನು ತಿನ್ನುವುದಕ್ಕಿಂತ ವೇಸ್ಟ್ ಮಾಡಿ ಬಿಸಾಕುವುದೇ ಹೆಚ್ಚು. ಹೀಗೆ ಉಳಿಸಿದ ಆಹಾರಗಳನ್ನು ಹೋಟೆಲ್ ಮಂದಿ ಕೊಳಚೆಗೆ ಬಿಸಾಕಿ ಪ್ರಾಣಿ ಪಕ್ಷಿಗಳೂ ತಿನ್ನದಂತೆ ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಕೇರಳದ ಹೋಟೆಲ್ ಒಂದು ಮಹತ್ವದ ಕಾರ್ಯ ಮಾಡಿದೆ.
ಕೊಚ್ಚಿಯ ರೆಸ್ಟೋರೆಂಟ್ ಒಂದರ ಹೊರಗೆ ರೆಫ್ರಿಜರೇಟರ್ ಒಂದನ್ನು ಇಡಲಾಗಿದೆ. ಇದಕ್ಕೆ ಸೊಗಸಾಹಿ ’ನನ್ಮ ಮರಮ್’ ಅಂದರೆ ಒಳ್ಳೆದರ ಮರ ಎಂಬ ಹೆಸರನ್ನು ಇಡಲಾಗಿದೆ. ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸುತ್ತದೆ. ಇದನ್ನು ಪಪ್ಪದವಡ ರೆಸ್ಟೋರೆಂಟ್ ಹೊರಗೆ ಇಡಲಾಗಿದೆ.
ರೆಸ್ಟೋರೆಂಟ್ಗೆ ಬಂದ ಗ್ರಾಹಕರು ತಿಂದು ಹೆಚ್ಚಾದ ಆಹಾರವನ್ನು ವೇಸ್ಟ್ ಮಾಡುವ ಬದಲು ಇದರೊಳಗಡೆ ಇಡಲಿ, ಇದರಿಂದ ಆಹಾರಕ್ಕೆ ಪರದಾಡುವ ಬಡವರ ಹಸಿವು ನೀಗಲಿ ಎಂಬ ಉದ್ದೇಶ ಈ ಫ್ರಿಡ್ಜ್ನ ಹಿಂದಿದೆ.
ಮಿನು ಪೌಲಿಮ್ ಎಂಬ ಫುಡ್ ಜಾಯಿಂಟ್ ನಡೆಸುವ ಮಹಿಳೆ ಈ ರೆಫ್ರಿಜರೇಟರ್ನ್ನು ಸ್ಥಾಪಿಸುವ ಐಡಿಯಾದ ಹಿಂದಿರುವವರು, ಆಹಾರವಿಲ್ಲದವರು ಇಲ್ಲಿಗೆ ಆಗಮಿಸಿದರೆ ಇಲ್ಲಿ ಉದಾರವಾಗಿ ಆಹಾರ ನೀಡಲಾಗುತ್ತದೆ. ಇದರಿಂದ ಯಾರೂ ಹಸಿವೆಯಿಂದ ಇರಬೇಕಾದ ಪ್ರಮೇಯ ಉದ್ಭವವಾಗುವುದಿಲ್ಲ.
ಮಿನು ಅವರ ಐಡಿಯಾ ಅತ್ಯುತ್ತಮವಾಗಿ ಕ್ಲಿಕ್ ಆಗಿದ್ದು ಜನರಿಂದ ಒಳ್ಳೆಯ ಸ್ಪಂದನೆ ದೊರಕುತ್ತಿದೆ. ಜನರು ಸ್ವಯಂಪ್ರೇರಣೆಯಿಂದ ಬಂದು ಆಹಾರವನ್ನು ಇಲ್ಲಿಡುತ್ತಾರೆ. ಹಸಿವಾಗಿ ಹಣಕೊಟ್ಟು ಆಹಾರವನ್ನು ಕೊಂಡುಕೊಳ್ಳಲಾಗದವರು ಇಲ್ಲಿಗೆ ಬಂದು ಆಹಾರವನ್ನು ಪಡೆಯುತ್ತಾರೆ. ಇದರಿಂದ ಆಹಾರ ಕೊಳಚೆ ಗುಂಡಿಗೆ ಸೇರುವುದು ತಪ್ಪುತ್ತದೆ. ಈ ಮಹತ್ವದ ಕಾರ್ಯ ಮಾಡಿದ ಮಿನು ಅವರು ನಿಜಕ್ಕೂ ಶ್ಲಾಘನೆಗೆ ಅರ್ಹರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.