ಕೋಝಿಕೋಡ್: ದೇಶಾದ್ಯಂತ 1000ಕ್ಕೂ ಅಧಿಕ ವಾಸ್ತುಶಿಲ್ಪಿಗಳು ಹಾಗೂ ನಗರ ಅಭಿವೃದ್ಧಿ ಯೋಜಕರು ಎಪ್ರಿಲ್ 7ರಿಂದ ಕೋಝಿಕೋಡ್ನಲ್ಲಿ ನಡೆಯಲಿರುವ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅತ್ಯುತ್ತಮ ವಾಸ್ತುಶಿಲ್ಪಕ್ಕಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (ಐಐಎ) ತಿಳಿಸಿದೆ.
ಐಐಎ ಆಯೋಜಿಸಿರುವ ಈ ಸಮ್ಮೇಳನದಲ್ಲಿ ಪ್ರಮುಖ ವಾಸ್ತುಶಿಲ್ಪಿಗಳಾದ ಶಾರುಖ್ ಮಿಸ್ತ್ರಿ, ಸಂಜಯ್ ಪುರಿ, ಬ್ರಿಂದಾ ಸೋಮಯ್ಯ, ಸಂಜಯ್ ಮೋಹೆ, ಕ್ರಿಸ್ಟಫರ್ ಚಾರ್ಲ್ಸ್ ಬೆನಿಂಗರ್, ಶಿಮುಲ್ ಜವೇರಿ ಕದ್ರಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಐಐಎ ತಿಳಿಸಿದೆ.
ಭಾರತಾದ್ಯಂತ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಐಐಎ ಸದಸ್ಯರ ಸೃಜನಶೀಲ ಕೊಡುಗೆಯನ್ನು ಪರಿಗಣಿಸಿ ಮೆಚ್ಚುಗೆ, ಗೌರವ ಸೂಚಿಸಲು ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಈ ಬಾರಿ ವಾಸ್ತುಶಿಲ್ಪಿಗಳು ತಮ್ಮ ಕಲಾಕೃತಿಗಳನ್ನು ಪ್ರಸ್ತುತಪಡಿಸಲು ಐಐಎ ಅಂತಾರಾಷ್ಟ್ರೀಯ ವೇದಿಕೆಯನ್ನು ರೂಪಿಸಲಿದೆ ಎಂದು ಐಐಎ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.