ನವದೆಹಲಿ: ಐಪಿಎಲ್ ಫಿಕ್ಸಿಂಗ್ ಹರಣದ ತನಿಖೆಗಾಗಿ ರಚಿಸಲಾಗಿರುವ ನೂತನ ತನಿಖಾ ತಂಡದ ನೇತೃತ್ವವನ್ನು ಸಿಬಿಐ ಎಸ್ಪಿ ವಿವೇಕ್ ಪ್ರಿಯದರ್ಶಿಗೆ ವಹಿಸುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಶುಕ್ರವಾರ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.
ಫಿಕ್ಸಿಂಗ್ ಹಗರಣದ ತನಿಖೆ ಕೈಗೊಳ್ಳುವ ಸಲುವಾಗಿ ಮೂರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಕಗೊಳಿಸಿದೆ. ಈ ಸಮಿತಿ 2ಜಿ ತರಾಂಗತರ ಹಗರಣದ ತನಿಖಾಧಿಕಾರಿಗಳ ಮತ್ತು ಸಿಬಿಐ ಎಸ್ಪಿ ವಿವೇಕ್ ಪ್ರಿಯದರ್ಶಿ ಅವರ ಸೇವೆಯನ್ನು ಇಲ್ಲಿ ಪಡೆಯುವ ಬಗ್ಗೆ ಸುಪ್ರೀಂಗೆ ಮನವಿ ಮಾಡಿತ್ತು. ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.
ಅಲ್ಲದೇ ಬೆಟ್ಟಿಂಗ್ ಆರೂಪಿಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಅದರ ಅಧಿಕಾರಿಗಳಾದ ಗುರುನಾಥ್ ಮೀಯಪ್ಪನ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಜ್ ಕುಂದ್ರಾ ಅವರಿಗೆ ನೀಡಬಹುದಾದ ಶಿಕ್ಷೆಯ ಪ್ರಮಾಣವನ್ನೂ ನಿಗಧಿ ಮಾಡುವಂತೆ ಈ ಸಮಿತಿಗೆ ಸುಪ್ರೀಂ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.