ಬೆಳ್ತಂಗಡಿ : ನಾನು ನನ್ನ ಗಂಡನಿಂದ ವಿಚ್ಛೇದನವನ್ನು ಬಯಸುತ್ತಿಲ್ಲ. ನಾನು ಅವರ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ ಎಂದು ನೇತ್ರಾವತಿ ಜೋಡುಸ್ಥಾನ ನಿವಾಸಿ ತಾರಾನಾಥ ಜಿ.ಎಸ್. ಎಂಬುವರ ಪತ್ನಿ ಹರ್ಷಿತ ಸ್ಪಷ್ಟ ಪಡಿಸಿದ್ದಾರೆ.
ಅವರು ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ದಾಂಪತ್ಯ ಜೀವನದ ಬಗ್ಗೆ ವಿವರ ನೀಡಿದರು. ನಾನು ತಾರನಾಥ ಎಂಬುವರೊಂದಿಗೆ ಎರಡು ವರ್ಷಗಳ ಹಿಂದ ಸಬ್ರಿಜಿಸ್ಟಾರ್ ಮತ್ತು ಆರ್ಯಸಮಾಜದಲ್ಲಿ ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ಕಳೆದ ಕೆಲ ತಿಂಗಳುಗಳಿಂದ ನಾನು ನನ್ನತವರು ಮನೆಗೆ ಬಂದಾಗ ನನ್ನ ತಂದೆ ತಾಯಿಯವರು ಗಂಡನೊಂದಿಗೆ ಇರದಂತೆ ಹಾಗೂ ವಿಚ್ಛೇದನ ನೀಡುವಂತೆ ಪೀಡಿಸುತ್ತಿದ್ದರು.
ಅಲ್ಲದೆ ನನಗೆ ಗೊತ್ತಿಲ್ಲದಂತೆ ವಕೀಲರ ಮೂಲಕ ವಿಚ್ಛೇದನ ನೀಡುವಂತೆ ನೋಟಿಸು ನೀಡಿರುತ್ತಾರೆ. ಇದಕ್ಕೆ ನನ್ನ ಒಪ್ಪಿಗೆ ಇರುವುದಿಲ್ಲ. ಈಚೆಗೆ ನನ್ನಗಂಡ ನನ್ನನ್ನು ತವರು ಮನೆಯಿಂದ ಕರೆದುಕೊಂಡು ಬಂದಿದ್ದರು. ಇದಕ್ಕೆ ತೀವ್ರ ಆಕ್ಷೇಪಿಸಿದ್ದ ತವರು ಮನೆಯವರು ನನ್ನ ಗಂಡನ ಮೇಲೆ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಆದರೆ ನಾನು ಸ್ವಇಚ್ಛೆಯಿಂದ ಮನೆಯವರ ಕಿರುಕುಳ ತಾಳಲಾರದೆ ತಾರಾನಾಥ ಅವರೊಂದಿಗೆ ಬಂದಿರುತ್ತೇನೆ. ಅಲ್ಲದೆ ನನಗೆ ರಕ್ಷಣೆ ನೀಡುವಂತೆ ಹಾಗೂ ನ್ಯಾಯಒದಗಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೇನೆ ಎಂದರು.
ನಾನು ಗಂಜಾಇ ತ್ಯಾದಿ ಚಟದವನೆಂದು, ಅದರ ವ್ಯವಹಾರ ಮಾಡುತ್ತೇನೆಂದು ಹರ್ಷಿತಳ ತವರು ಮನೆಯವರು ಆಪಾದಿಸಿರುವುದು ನನಗೆ ತುಂಬಾ ನೋವನ್ನುಂಟು ಮಾಡಿದೆ. ಆದರೆ ನಾನು ಅಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿರುವುದಿಲ್ಲ. ನಮ್ಮಿಬ್ಬರ ಜಾತಿ ಬೇರೆ ಎಂಬ ಕಾರಣಕ್ಕೆ ಈ ಎಲ್ಲಾ ಗೊಂದಲಗಳು, ಗಲಾಟೆ ನಡೆದಿದೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಹರ್ಷಿತಾಳ ಮಾವ ಪ್ರಕಾಶ್ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.